ಬೆಳ್ತಂಗಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ. ಬೆಳ್ತಂಗಡಿ ವಲಯದ ಅಯೋಜಕತ್ವದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಛಾಯಾ ಮುದ್ದುಕಂದ ಫೋಟೋ ಸ್ಫರ್ಧೆ 2024 ರ ಬಹುಮಾನ ವಿತರಣಾ ಕಾರ್ಯಕ್ರಮವು ಡಿ. 12 ರಂದು ಗುರುವಾಯನಕೆರೆ ಛಾಯಾ ಭವನ ನಡೆಯಲಿರುವುದು. ಪ್ರಥಮ ಎಝಲ್ ಬಿಯಾಂಕ ಬೆಳ್ತಂಗಡಿ, ದ್ವಿತೀಯ ಜಾಹ್ನವಿ ರೈ ಕುಕ್ಕೇಡಿ ವೇಣೂರು, ತೃತೀಯ ಅನ್ಶಿ ಶೆಟ್ಟಿ ಗೇರುಕಟ್ಟೆ.
ಮೆಚ್ಚುಗೆ ಪಡೆದ ಚಿತ್ರಗಳು ಶ್ರೀಯಾ. ಎಸ್ ಚಾರ್ಮಾಡಿ, ಸುಗ್ಯ ಎಸ್ ಕೋಟ್ಯಾನ್ ನಿಟ್ಟಡೆ, ಡೆನ್ವರ್ ಎವನ್ ಡಿಸೋಜಾ ಬೆಳ್ತಂಗಡಿ, ವೈಷ್ಣವಿ ಹೆಬ್ಬಾರ್ ಕಲ್ಮಂಜ, ಶಶಿಕಲಾ ಎಸ್ ಎಂಜಿರ.ರೆಖ್ಯಾ ಬಹುಮಾನ ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಎಸ್. ಕೆ. ಪಿ. ಎ ಬೆಳ್ತಂಗಡಿ ವಲಯದ ಅಧ್ಯಕ್ಷೆ ಸಿಲ್ವಿಯಾ, ಪ್ರಧಾನ ಕಾರ್ಯದರ್ಶಿ ವಿಜಯ ಎಚ್. ಪ್ರಸಾದ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರದ್ವಜ್, ಛಾಯಾ ಕಾರ್ಯದರ್ಶಿ ವೆಂಕಟೇಶ್ ಬೆಳಾಲ್, ಗೌರವಾಧ್ಯಕ್ಷ ಜಗದೀಶ್ ಜೈನ್, ಉಪಾಧ್ಯಕ್ಷ ಗಣೇಶ್ ವೇಣೂರು, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಉಜಿರೆ, ಸಂಘಟನಾ ಕಾರ್ಯದರ್ಶಿ ಗಣೇಶ್ ಹೆಗ್ಡೆ ನಾರವಿ, ಸಲಹಾ ಸಮಿತಿ ಸದಸ್ಯರು, ಪದಾಧಿಕಾರಿಗಳು ಹಾಗೂ ಸದಸ್ಯರು, ಛಾಯಾ ಮುದ್ದುಕಂದ ಫೋಟೋ ಸ್ಫರ್ಧೆಯ ಮಕ್ಕಳ ಪೋಷಕರು ಉಪಸ್ಧರಿದ್ದರು.
ವಂಸತ್ ಶರ್ಮ ಸ್ವಾಗತಿಸಿ, ಮನು ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ಪ್ರತಿನಿಧಿ ರಂಜನ್ ಕುಮಾರ್ ನೆರಿಯ ವಂದಿಸಿದರು.