ಶ್ರೀ ಮಹಾಗಣಪತಿ ಭಜನಾ ಮಂದಿರದ ಅನ್ನಛತ್ರ ಕಾಮಗಾರಿ – ಡಾ. ಡಿ. ವೀರೇಂದ್ರ ಹೆಗ್ಗಡೆ – 1. ಲಕ್ಷ ರೂ. ಮಂಜೂರು

0

p>

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಪುದುವೆಟ್ಟು ಗ್ರಾಮದ ಶಾಂತಿನಗರ ಶಾಂತ್ಯಾಯ ಶ್ರೀ ಮಹಾಗಣಪತಿ ಭಜನಾಮಂದಿರದ ಅನ್ನಛತ್ರ ಕಟ್ಟಡದ ಕಾಮಗಾರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಮಂಜೂರು ಮಾಡಿರುವ 1.ಲಕ್ಷ ರೂಪಾಯಿ ಮೊತ್ತದ ಮಂಜೂರಾತಿ ಪತ್ರವನ್ನು ಶ್ರೀಮಹಾಗಣಪತಿ ಭಜನಾ ಮಂಡಳಿಯ ಅಧ್ಯಕ್ಷ ಜನಾರ್ದನ ಗೌಡ ಹಾಗೂ ಪದಾಧಿಕಾರಿಗಳಿಗೆ ವಿತರಣೆ ಮಾಡಲಾಯಿತು.

ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಅನಿತಾ, ಗ್ರಾಮ ಪಂಚಾಯತ್ ಸದಸ್ಯ ಯಶವಂತ ಗೌಡ, ಜನಜಾಗೃತಿ ಗ್ರಾಮ ಸಮಿತಿಯ ಅಧ್ಯಕ್ಷ ದೇವಣ್ಣ ಗೌಡ ಬೊಲ್ಮನಾರು, ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಿತ್ಯಾನಂದ ಗೌಡ, ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ ಬಿ., ಬೊಲ್ಮನಾರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಆನಂದ ಗೌಡ, ಭಜನಾ ಮಂದಿರದ ಅರ್ಚಕ ಬಾಬು ಗೌಡ ಹಾಗೂ ಭಜನಾ ಮಂಡಳಿಯ ಎಲ್ಲ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶೇಖರ ಗೌಡ ಶಾಂತ್ಯಾಯ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಬಂದಿರುವ ಎಲ್ಲಾ ಅತಿಥಿ ಅಭ್ಯಾಗತರನ್ನು ರಮೇಶ್ ಸಾಲ್ಯಾನ್ ಸ್ವಾಗತಿಸಿದರು. ಭಜನಾ ಮಂದಿರದ ವರದಿ ವಾಚನವನ್ನು ಹರೀಶ್ ಪಟ್ಲ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಬಂದಿರುವ ಎಲ್ಲಾ ಅತಿಥಿ ಅಬ್ಯಾಗತರು ಹಾಗೂ ಗ್ರಾಮಸ್ಥರಿಗೆ ಸುರೇಶ್ ಅಭಿನಂದನೆಯನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here