ಉಜಿರೆ: ಕಾಲೇಜಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ಸ್ವಸ್ತಿಕಾ ನ್ಯಾಷನಲ್ ಸ್ಕೂಲ್ ಆಫ್ ಬಿಸ್ಸಿನೆಸ್ ಸಂಸ್ಥೆಯ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಎನ್. ಮಾತನಾಡಿ ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಮೌಲ್ಯದಾರಿತ ಶಿಕ್ಷಣದಲ್ಲೂ ಪರಿಣಿತಿ ಪಡೆಯಬೇಕು, ಆಗ ಕಲಿತ ವಿದ್ಯೆಗೆ ಬೆಲೆ. ನಿಖರ ಗುರಿಯೊಂದಿಗೆ ಸಾಗಿದಾಗ ನಾವು ಅಂದುಕೊಂಡದ್ದು ನಮ್ಮ ಕೈ ಸೇರುವುದು. ಪ್ರತಿ ವಿದ್ಯಾರ್ಥಿಗಳಿಗೂ ಅವರದ್ದೇ ಆದ ಪ್ರತಿಭೆಗಳಿರುವುದು, ಸ್ವಂತಿಕೆ ಇರುವುದು ಹಾಗಾಗಿ ಯಾರೊಂದಿಗೂ ಹೋಲಿಸಬೇಡಿ. ನಿರಂತರ ಸಾಣೆ ಹಿಡಿಯುವ ಕೆಲಸ ಮಾತ್ರ ಮಾಡಿ ಎಂದರು. ಅಲ್ಲದೇ ಮೌಂಟ್ ಎವರೆಸ್ಟ್ ಏರಿದ ಎರಡನೇ ಮಹಿಳೆ ಅರುಣಿಮಾ ಸಿನ್ಹ ಇವರ ಬದುಕಿನ ರೋಚಕ ಕಥೆ ಹೇಳುವುದರ ಮೂಲಕ ಸಾಧನೆಗೆ ಸ್ಫೂರ್ತಿ ತುಂಬಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಡಿ. ಎಂ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಸತೀಶ್ಚಂದ್ರ ಎಸ್. ಮಾತನಾಡಿ, ವಸತಿ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ವಿದ್ಯಾರ್ಥಿಗಳ ಗುಣ ನಡತೆ, ಕಲಿಕಾ ಮನಸ್ಥಿತಿ, ಕ್ರೀಡಾಸಕ್ತಿ ಉತ್ತಮವಾಗಿದೆ. ಈ ಸ್ಪರ್ಧಾತ್ಮಕ ಇನ್ನಷ್ಟು ಸಾಧನೆ ಶಿಖರಯೇರುವಂತಾಗಲಿ, ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.
2023-24 ನೇ ಸಾಲಿನಲ್ಲಿ ರಾಜ್ಯಕ್ಕೆ 7 ನೇ ರಾಂಕ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಮೇಲುಗೈ ಸಾಧಿಸಿದ ಎಂ. ಧೀಮಂತ್ ಹೆಬ್ಬಾರ್ ಹಾಗೂ ಹೆಚ್ಚು ಅಂಕದ ಜೊತೆಗೆ CEET /JEE ಯಲ್ಲಿ ಉತ್ತಮ ಸಾಧನೆ ಮಾಡಿದ ಹರ್ಷಿತ್ ಕೆ. ವಿ., ವಿಶ್ವಾಸ್ ನಾಯಕ್ ಇ., ಸಂಜಯ್ ಪಾಟೀಲ್ ಕೆ. ಎಲ್., ವಿನಯ್ ಸಿ. ಎಂ, ಕಾರ್ತಿಕ್ ಹೆಚ್ ಇವರನ್ನು ಸನ್ಮಾನಿಸಲಾಯಿತು.
ಪ್ರಥಮ ವರ್ಷದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ನಾಯಕ ಅಬ್ಜಿತ್ ದಿನೇಶ್, ಕಾರ್ಯದರ್ಶಿ ಶ್ರೇಯಸ್ ಗೌಡ ಟಿ. ಏನ್. ಹಾಗು ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಸಂಸ್ಥೆಯ ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಪಕರು, ವಿದ್ಯಾರ್ಥಿಗಳ ಹೆತ್ತವರು, ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿ ಹಾಗೂ ಶಿಕ್ಷಕರಿಂದ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ವಾಣಿ ಎಂ. ಎಂ. ಸ್ವಾಗತಿಸಿದರು. ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ವಿಕ್ರಂ ಪಿ., ಗಣಿತಶಾಸ್ತ್ರ ಉಪನ್ಯಾಸಕಿ ಪ್ರಿಯ ನಿರೂಪಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಶ್ರೀ ಮನೀಶ್ ಕುಮಾರ್ ವಂದಿಸಿದರು.