p>
ಬೆಳ್ತಂಗಡಿ: ಶ್ರೀ ಧರ್ಮಸ್ಥಳ ದೀಪೋತ್ಸವ ಪ್ರಯುಕ್ತ ಭಜನಾ ಸಂಕೀರ್ತನ್ ಕಾರ್ಯಕ್ರಮ ಶ್ರೀ ಧರ್ಮಸ್ಥಳ ದೀಪೋತ್ಸವದ ಪ್ರಯುಕ್ತ ಪಾದಯಾತ್ರೆಯ ಕಾರ್ಯಕ್ರಮದಲ್ಲಿ ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರ ಶ್ರೀ ಸಾಯಿ ನಗರ ಹಳೆಕೋಟೆ ಬೆಳ್ತಂಗಡಿಯ ಸದಸ್ಯರಿಂದ ಭಜನಾ ಸಂಕೀರ್ತನ್ ಕಾರ್ಯಕ್ರಮ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನ ಉಜಿರೆಯಿಂದ ಪ್ರಾರಂಭಗೊಂಡು ನಂತರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಭಜನಾ ಸಂಕೀರ್ತನ್ ಕಾರ್ಯಕ್ರಮ ಜರಗಿತು.
ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದ ಸ್ವೀಕರಿಸಿ, ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಕುಟುಂಬದವರು ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಪಾದಯಾತ್ರೆ ಸಮಿತಿಯವರು ಸಹಕರಿಸಿದರು.
ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರ ಶ್ರೀ ಸಾಯಿ ನಗರ ಹಳೆಕೋಟೆ ಬೆಳ್ತಂಗಡಿ ಹಾಗೂ ಸನಾತನ ಸಾರಥಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿಯ ಅಧ್ಯಕ್ಷ ಸಿ. ಹೆಚ್. ಪ್ರಭಾಕರ್ ಹಾಗೂ ಸದಸ್ಯರೆಲ್ಲರೂ ಸಹಕರಿಸಿದರು.
p>