ಬೆಳಾಲು: ಎಸ್. ಡಿ. ಎಂ. ಸಿ ಪುನರ್ ರಚನಾ ಕಾರ್ಯ ಇಲಾಖೆ ನಿಯಮಗಳಂತೆ ನಡೆದಿದ್ದು, ವಿಧಿವತ್ತಾಗಿ ಸ್ಥಾಪಿಸಲ್ಪಟ್ಟ ಪಾಲಕರ ಪರಿಷತ್ತಿನಿಂದ 18 ಮಂದಿ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 18 ಮಂದಿ ಸದಸ್ಯರಲ್ಲಿ ಸುರೇಂದ್ರ ಗೌಡ, ಶಶಿಕಲಾ, ಗೀತಾ, ವಿಶ್ವನಾಥ್, ಪದ್ಮಾವತಿ, ಲಕ್ಷ್ಮಣ್ ನಾಯ್ಕ, ಎನ್. ಹಕ್ಕೀ, ಪ್ರಭಾಕರ್ , ಶಶಿಧರ ಆಚಾರ್ಯ, ಮೋಹನ್, ಹರಿಪ್ರಸಾದ್ , ಗೋಪಾಲ ಗೌಡ, ಭವಾನಿ, ಶಕುಂತಲಾ, ವಿಮಲಾ , ಮಾಧವಿ, ಜಾನಕಿ , ಸುಮತಿ ಮೀಸಲು ಪ್ರಾತಿನಿಧ್ಯ ವಾರು ಆಯ್ಕೆಯಾಗಿದ್ದಾರೆ.
ಇವರಲ್ಲಿ ಒಮ್ಮತದೊಂದಿಗೆ ಮಾಯ ಶಾಲೆಯ ಅಭಿವೃದ್ಧಿಯ ಅಧ್ಯಕ್ಷರಾಗಿ ಸುರೇಂದ್ರ ಗೌಡ ಸುರುಳಿ ಇವರನ್ನು ಅಧ್ಯಕ್ಷರನ್ನಾಗಿ ಎರಡನೇ ಬಾರಿಗೆ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಶಶಿಕಲಾರನ್ನು ಆಯ್ಕೆ ಮಾಡಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯ ವಿಠಲ್ ಎಂ. ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿಸಿದರು. ಗ್ರಾ.ಪಂ ಸದಸ್ಯೆ ಪ್ರೇಮಾ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಜ್ಯೋತಿ ಎಂ. ಎಸ್, ಜಾನ್ಸಿ ಸಿ. ವಿ ಹಾಗೂ ಜಿ.ಪಿ.ಟಿ ಶಿಕ್ಷಕ ಯೋಗೇಶ ಹೆಚ್. ಆರ್. ಸಮಿತಿ ರಚನಾ ಕಾರ್ಯದಲ್ಲಿ ಸಹಕರಿಸಿದರು.