

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಜೇಸಿ ಸಪ್ತಾಹ ಸುಧಾಮ ಸ್ನೇಹ – ಸಾಧನೆ -ಸಮ್ಮಿಲನ ಡಿ. 14 ರಿಂದ 20ರವರೆಗೆ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದ ಸಭಾ ಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಜಿಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್. ಡಿ. ಮತ್ತು ಜೇಸಿ ಸಪ್ತಾಹದ ಸಂಯೋಜಕಿ ಹೇಮಾವತಿ ಹೇಳಿದರು. ಡಿ. 9 ರಂದು ಬೆಳ್ತಂಗಡಿ ಜೇಸಿ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು.
47ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬೆಳ್ತಂಗಡಿ ಜೆಸಿಐ ಈ ವರ್ಷ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಲಯ ಮಟ್ಟದಲ್ಲಿ ಅತ್ಯುತ್ತಮ ಘಟಕ, ಅತ್ಯುತ್ತಮ ಘಟಕ ಅಧ್ಯಕ್ಷ ಪ್ರಶಸ್ತಿಗೆ ಪಾತ್ರವಾಗಿದೆ.
ಡಿ. 14 ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಸಂಸದ ಬ್ರೆಜೇಶ್ ಚೌಟ, ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಇನ್ನಿತರರು ಭಾಗವಹಿಸಲಿದ್ದಾರೆ.
ಡಿ. 15 ರಂದು ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಸಮೂಹ ಜನ ಪದ ಗೀತೆ, ಕೇರಂ, ಚೆಸ್ ಸ್ಪರ್ಧೆ, ಚುಕ್ಕಿ ರಂಗೋಲಿ ಮೊದಲಾದ ಸ್ಪರ್ಧೆ ನಡೆಯಲಿದೆ. ಒಂದು ವಾರ ವಿವಿಧ ಕಾರ್ಯಕ್ರಮಗಳು ನಡಯಲಿದ್ದು, ಡಿ. 20ರಂದು ಸಮಾರೋಪ ಸಮಾರಂಭದಲ್ಲಿ ಮಂಗಳೂರು, ಕೊಡಗು ರಾಷ್ಟೀಯ ಹೆದ್ದಾರಿ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಬೆಳ್ತಂಗಡಿ ಗುರುದೇವ ವಿವಿದೋದ್ಧೆಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭಾ ಮಾನಿಂಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮುಳಿಯ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್
ಕೃಷ್ಣನಾರಾಯಣ ಮುಳಿಯ, ಜಿ. ಪ. ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಜೇಸಿಐ ಪೂರ್ವ ವಲಯಾಧ್ಯಕ್ಷ ಸಂಪತ್ ಬಿ. ಸುವರ್ಣ, ಉದ್ಯಮಿ ಅಶ್ವತ್ ಹೆಗ್ಡೆ ಬಳಂಜ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್ ಕಲ್ಲಾಪು ಭಾಗವಹಿಸಲಿದ್ದಾರೆ.
ಪ್ರತಿ ದಿನ ಗೌರವ ಸನ್ಮಾನ, ಸಾಧನಾ ಶ್ರೀ ಸೇವಾ ಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದನೃತ್ಯ ಸ್ಪರ್ಧೆ ನೃತ್ಯ ಸಿಂಚನ, ಡ್ಯಾನ್ಸ್ ಧಮಾಕಾ ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆ, ಸ್ಟಾರ್ ಸಿಂಗರ್ ಸ್ಪರ್ಧೆ, ತುಳುನಾಡು ಫ್ಯಾಷನ್ ಶೋ, ಗುರುವಾಯನಕೆರೆ ಎಕ್ಷಲ್ ಕಲಾ ಸಂಭ್ರಮ, ಆದರ್ಶ ದಂಪತಿಗಳು ಬೆಸ್ಟ್ ಜೋಡಿಯ ಮಸ್ತ್ ಶೋ, ಮಂಜೇಶ್ವರ ಶಾರದಾ ಆರ್ಟ್ಸ್ ಕಲಾವಿದರಿಂದ ಕಥೆ ಎಡ್ಡೆಂಡು ನಾಟಕ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಪೂರ್ವ ಅಧ್ಯಕ್ಷರುಗಳಾದ ಚಿದಾನಂದ ಇಡ್ಯಾ, ನಾರಾಯಣ ಶೆಟ್ಟಿ, ಸಪ್ತಾಹದ ಸಹ ಸಂಯೋಜಕ ರಕ್ಷಿತ್ ಅಂಡಿಂಜೆ ಉಪಸ್ಥಿತರಿದ್ದರು.