ಬಳಂಜ: ಪ್ರತೀ ಗ್ರಾಮದಲ್ಲಿರುವ ಶಾಲೆ, ಸೊಸೈಟಿ, ಪಂಚಾಯತ್, ದೇವಸ್ಥಾನ, ಪ್ರಾರ್ಥನಾಲಯಗಳು, ಉದ್ದಿಮೆ, ಪ್ರೇಕ್ಷಣೀಯ ಸ್ಥಳಗಳ ಸಂಪೂರ್ಣ ಮಾಹಿತಿ ಮತ್ತು ದೇಶ-ವಿದೇಶ ಸಹಿತ ಪರವೂರಿನಲ್ಲಿರುವ ಬಳಂಜದವರ ಮಾಹಿತಿ ಸಂಗ್ರಹಿಸಿ ಜಗತ್ತಿಗೆ ಒದಗಿಸುವ ನಮ್ಮೂರು-ನಮ್ಮ ಹೆಮ್ಮೆ ಅರಿವು ಅಭಿಯಾನ ಬಳಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಡಿ. 6ರಂದು ನಡೆಯಿತು.
ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರು, ಮಾಜಿ ಮಂಡಲ ಪ್ರಧಾನ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಸಂತ ಸಾಲಿಯಾನ್ ಕಾಪಿನಡ್ಕ ಉದ್ಘಾಟಿಸಿ, ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್ ವಹಿಸಿದ್ದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು. ಪಿ. ಶಿವಾನಂದ ಕಾರ್ಯಕ್ರಮದ ಉದ್ದೇಶದ ಕುರಿತು ವಿವರ ನೀಡಿದರು.
ಸುಳ್ಯ ಸುದ್ದಿ ಬಿಡುಗಡೆಯ ಸಂಪಾದಕ ಹರೀಶ್ ಬಂಟ್ವಾಳ ಪ್ರಸ್ತಾವನೆ ಗೈದರು. ಪಂಚಾಯತ್ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ, ಪಂಚಾಯತ್ ಸದಸ್ಯ ಯಕ್ಷತಾ, ರವೀಂದ್ರ ಬಿ. ಅಮೀನ್, ಜಯ ಶೆಟ್ಟಿ, ಪದ್ಮಾವತಿ, ಅಳದಂಗಡಿ ಸಹಕಾರ ಸಂಘದ ನಿರ್ದೇಶಕರುಗಳಾದ ದೇಜಪ್ಪ ಪೂಜಾರಿ, ದಿನೇಶ್ ಪಿ.ಕೆ., ವಿಶ್ವನಾಥ್ ಹೊಳ್ಳ, ಸಾಮಾಜಿಕ ಕಾರ್ಯಕರ್ತ ಸಂದೀಪ್ ನೀರಲ್ಕೆ, ಪ್ರಮುಖರಾದ ಸಂತೋಷ ಕುಮಾರ್ ಕಾಪಿನಡ್ಕ, ನಿತ್ಯಾನಂದ ಹೆಗ್ಡೆ, ಸುಬ್ರಹ್ಮಣ್ಯ ಭಟ್, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಿ ಇ ಓ ಸಿಂಚನ ಊರುಬೈಲು, ಸಂಪಾದಕ ಸಂತೋಷ ಕುಮಾರ್, ಮ್ಯಾನೇಜರ್ ಮಂಜುನಾಥ್ ರೈ, ಚಾನಲ್ ಮುಖ್ಯಸ್ಥ ದಾಮೋದರ ದೊಂಡೋಲೆ, ಪುಷ್ಪರಾಜ್ ಶೆಟ್ಟಿ, ಹಿರಿಯ ವರದಿಗಾರ ಜಾರಪ್ಪ ಪೂಜಾರಿ ಬೆಳಾಲು, ಬಳಂಜ ಸುದ್ದಿ ಪ್ರತಿನಿಧಿ ಸದಾನಂದ ಸಾಲಿಯಾನ್, ಹಿರಿಯ ಪ್ರತಿನಿಧಿ ಕೃಷ್ಣಪ್ಪ ಪೂಜಾರಿ, ಸುದ್ದಿ ಬಿಡುಗಡೆ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದವರು, ಸ್ವಸಹಾಯ ಸಂಘದವರು, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಪ್ರಮುಖರು, ಪಂಚಾಯತ್ ಸಿಬ್ಬಂದಿಗಳು, ಊರವರು ಹಾಜರಿದ್ದರು. ಚಾನಲ್ ನಿರೂಪಕಿ ಶ್ರೇಯ ಶೆಟ್ಟಿ ನಿರೂಪಿಸಿದರು.