p>
ಕುವೆಟ್ಟು: ಮದ್ದಡ್ಕ ಸಮೀಪದ ನೇರಳಕಟ್ಟೆ ಶ್ರೀ ಕಾಂಪ್ಲೆಕ್ಸ್ ನಲ್ಲಿ ಧನಸ್ವೀ ಗ್ರಾನೈಟ್ ಮತ್ತು ಟೈಲ್ಸ್ ಸಂಸ್ಥೆ ಡಿ. 6 ರಂದು ಶುಭಾರಂಭಗೊಂಡಿತು. ವೇದಮೂರ್ತಿ ಶಾಂತ ಕುಮಾರ್ ಭಟ್ ಬೆಳ್ಳಾರೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಕಟ್ಟಡದ ಮಾಲಕರಾದ ಜನಾರ್ಧನ ಭಟ್ ನೇರಳಕಟ್ಟೆ, ಸಂಸ್ಥೆಯ ಮಾಲಕರಾದ ಮುರಳಿಧರರವರ ತಂದೆ ನಾರಾಯಣ ಭಟ್ ಉoಡಿಲ, ಸ್ಥಳೀಯರಾದ ಕೃಷ್ಣ ಭಟ್, ಸಚಿನ್ ವರ್ಧನ್, ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಮರಳೀಧರ ಎನ್. ಅತಿಥಿಗಳನ್ನು ಸ್ವಾಗತಿಸಿದರು. ಪೂರ್ಣಿಮಾ ಮುರಳಿಧರ ಮತ್ತು ಓಜಸ್ವೀ ಎನ್. ಎಲ್ಲಾ ಗಣ್ಯರನ್ನು ಸತ್ಕರಿಸಿದರು.