ಬಳ್ಳಮಂಜ: ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಮಡಂತ್ಯಾರು ಪೇಟೆಗೆ ಸಮೀಪವಿರುವ ತುಳುನಾಡಿನ ಇತಿಹಾಸ ಪ್ರಸಿದ್ಧ ನಾಗಕ್ಷೇತ್ರ ಬಳ್ಳಮಂಜ. ಈ ಕ್ಷೇತ್ರದ ಸೊಬಗಿಗೆ ತಕ್ಕಂತೆ ಇಲ್ಲಿ ಶ್ರೀ ಅನಂತೇಶ್ವರ ದೇವರ ದಿವ್ಯ ಸನ್ನಿಧಿ ಇದ್ದು, ಭಕ್ತ ಜನರ ಇಷ್ಟಾರ್ಥವನ್ನು ಈಡೇರಿಸುವ ಶ್ರದ್ದಾ ಕೇಂದ್ರವಾಗಿರುತ್ತದೆ.
ತುಳುನಾಡಿನ ಇತಿಹಾಸದ ಪ್ರಕಾರ ಬಳ್ಳಮಂಜ ಎಂದರೆ ಬೆಳ್ಳಿಯ ಹುತ್ತ ಎಂದು ವ್ಯಾಖ್ಯಾನಿಸುತ್ತಾರೆ. ವರ್ಷಂಪ್ರತಿಯಂತೆ ಜರಗುವ ಷಷ್ಠಿ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜರಗಲಿರುವುದು. ಡಿ. 6 ರಂದು ಬೆಳಿಗ್ಗೆ 8.00 ಕ್ಕೆ ಕೊಪ್ಪರಿಗೆ ಮುಹೂರ್ತ, ಅಂಗಪ್ರದಕ್ಷಿಣೆ 9.30 ರಿಂದ ನೂತನ ಸ್ವರ್ಣ ಅಟ್ಟೆ ಪ್ರಭಾವಳಿಯ ವೈಭವೋಪೇತ ಮೆರವಣಿಗೆ ಹಾಗೂ ಸಮರ್ಪಣೆ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸಿದ್ದರು.
10 ರಿಂದ ವಿದ್ವಾನ್ ಶ್ರೀಕೃಷ್ಣ ಗೋಪಾಲ ಪುಂಜಾಲಕಟ್ಟೆ ಮತ್ತು ಬಳಗದವರಿಂದ ವೇಣುವಾದನ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ 7.00ಕ್ಕೆ ರಂಗಪೂಜೆ, ಗಂಟೆ 8.00 ರಿಂದ ಪಂಚಮಿ ಉತ್ಸವ.
ಡಿ. 7 ರಂದು ಬೆಳಿಗ್ಗೆ 7 ರಿಂದ ಷಷ್ಠಿ ಉತ್ಸವ ಪ್ರಾರಂಭ, ಗಂಟೆ 11ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ. ಅಪರಾಹ್ನ 12.30 ಕ್ಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಕಟ್ಟೆ ಪೂಜೆ, ದರ್ಶನ ಬಲಿ.
ಡಿ. 8 ರಂದು ಮಹಾಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಆನುವಂಶಿಯ ಆಡಳಿತ ಮೊಕ್ತೇಸರ ಡಾ. ಎಂ. ಹರ್ಷ ಸಂಪಿಗೆತ್ತಾಯ ಅರ್ಚಕ ವೃಂದ ತಿಳಿಸಿದರು.