ಲಾಯಿಲ: ದಯಾ ವಿಶೇಷ ಶಾಲೆ, ವಿಮುಕ್ತಿ ಡಿ. 4 ರಂದು ವಿಶ್ವ ಅಂಗವಿಕಲರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ವಂ. ಫಾ. ವಿನೋದ್ ಮಸ್ಕರೇನಸ್, ಯದುಪತಿ ಗೌಡ,
ಪ್ರಾಂಶುಪಾಲರು ವಾಣಿ ಆಂಗ್ಲ ಮಾಧ್ಯಮ ಶಾಲೆ, ಪ್ರಿಯಾ ಆಗ್ನೆಸ್, ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಬೆಳ್ತಂಗಡಿ, ವಂ. ಫಾ. ರೋಹನ್ ಲೋಬೋ, ಸಹ-ನಿರ್ದೇಶಕರು ಸಿ. ಕೆ. ಎಸ್. ಕೆ, ಹೈದರ್ ಪ್ರಾಂಶುಪಾಲರು, ಮನ್‌ಶರ್ ಪ್ಯಾರಾ ಮೆಡಿಕಲ್ ಕಾಲೇಜ್ ಗೇರುಕಟ್ಟೆ, ಶಾಲಾ ಪೋಷಕ ಪ್ರತಿನಿಧಿಯಾಗಿ ಶುಭಕರ್, ಶಾಲಾ ವಿಧ್ಯಾರ್ಥಿ ಪ್ರತಿನಿಧಿಯಾಗಿ ಮಾಸ್ಟರ್ ಸಾಬಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಂ. ಫಾ. ವಿನೋದ್ ಮಸ್ಕರೇನಸ್ ಮಾತನಾಡಿ, ಪ್ರತಿ ಸರಕಾರಿ ಕಛೇರಿಗಳಲ್ಲಿ ಹಾಗೂ ಇನ್ನಿತರ ಸಾಮಾಜಿಕ ವ್ಯವಸ್ಥೆಗಳಲ್ಲಿ ವಿಶೇಷ ಚೇತನ ಮಕ್ಕಳಿಗೆ ವಿವಿಧ ಉದ್ಯೋಗ ಅವಕಾಶಗಳು ಒದಗಿಸಿಕೊಡುವ ಅಗತ್ಯವಿದೆ ಹಾಗೂ ನಮ್ಮ ಸಮಾಜದಲ್ಲಿ ವಿಶೇಷ ಚೇತನ ಮಕ್ಕಳಿಗೆ ಸಂಬಂದಿಸಿದಂತೆ ಮಗು ಸ್ನೇಹಿ ವಾತಾವರಣವನ್ನು ಬೆಳೆಸಬೇಕು ಇದರಿಂದ ಈ ಮಕ್ಕಳಿಗೂ ಸಮಾನ ಸವಕಾಶವನ್ನು ನಾವು ನೀಡಿದಂತಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯದುಪತಿ ಗೌಡ, ಪ್ರಾಂಶುಪಾಲರು ವಾಣಿ ಆಂಗ್ಲ ಮಾಧ್ಯಮ ಶಾಲೆ ಇವರು ಮಾತನಾಡಿ, ವಿಶೇಷ ಚೇತನ ಮಕ್ಕಳಿಗೂ ಈ ಸಮಾಜದಲ್ಲಿ ಸಮಾನ ಸ್ಥಾನಮಾನಗಳನ್ನು ಪಡೆದು ಬದುಕುವ ಹಕ್ಕಿದೆ. ಶಾಲೆಯಲ್ಲಿ ಪ್ರತಿಯೊಬ್ಬ ಮಗುವೂ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇಂತಹ ದಿವ್ಯಾಂಗ ಮಕ್ಕಳ ಸೇವೆಯನ್ನು ಮಾಡುತ್ತಿರುವ ಈ ಸಂಸ್ಥೆಯು ನಮ್ಮ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಅಭಿನಂದಿಸಿದರು.
ಪ್ರಿಯಾ ಆಗ್ನೆಸ್ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಬೆಳ್ತಂಗಡಿ ಇವರು ಸಂಸ್ಥೆಗೆ ಶುಭ ಕೋರುತ್ತಾ, ಸಮಾಜದಲ್ಲಿರುವ ನಾವೆಲ್ಲರೂ ಒಂದಾಗಿ ಈ ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ. ಈ ಮಕ್ಕಳಿಗೆ ಇಂದು ಸಾಧನೆ ಮಾಡಲು ಅವಕಾಶಗಳು ಬಹಳಷ್ಟು ಇವೆ. ಪೋಷಕರು ತಮ್ಮ ಮಕ್ಕಳನ್ನು ತಮ್ಮ ಜೊತೆಯಲ್ಲಿರಿಸಿಕೊಂಡು, ಅವರ ಆರೈಕೆ ಮಾಡಿ, ಅವರಿಗೆ ತಮ್ಮ ಜೀವನ ನಿರ್ವಹಣೆಗೆ ಬೇಕಾದ ಅಗತ್ಯ ಕೌಶಲ್ಯಗಳನ್ನೂ ಕಲಿಸಿಕೊಡಬೇಕಾಗುತ್ತದೆ. ನಮ್ಮೆಲ್ಲ ಪೋಷಕರಿಗೆ ಈ ಸಂಸ್ಥೆಯು ಒಂದು ವರದಾನವಾಗಿದೆ ಎಂದರು.
ಹೈದರ್ ಪ್ರಾಂಶುಪಾಲರು, ಮನ್‌ಶರ್ ಪ್ಯಾರಾ ಮೆಡಿಕಲ್ ಕಾಲೇಜ್, ಗೇರುಕಟ್ಟೆ ಹಾಗೂ ಅಲ್ಲಿನ ಶಿಕ್ಷಣಾಧಿಕಾರಿಗಳು ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಾಲಾ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ನೆರವೇರಿಸಿಕೊಟ್ಟರು. ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ ಕ್ರೀಡಾ ಕೂಟ ಹಾಗೂ ಶಾಲಾ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
ಶಾಲಾ ಶಿಕ್ಷಕಿ ನಳಿನಾಕ್ಷಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾತಿ ವಂದಿಸಿದರು.