ಶಕ್ತಿನಗರ: ಗುರುವಾಯನಕೆರೆಯ ಶಕ್ತಿನಗರ ಬಸ್ ಸ್ಟಾಪ್ ಬಳಿ ಸ್ಥಳಾಂತರ ಗೊಂಡಿರುವ ಅನುಗ್ರಹ ಎಂಟರ್ಪ್ರೈಸಸ್ ನವಶಕ್ತಿಯ ಶಶಿಧರ್ ಶೆಟ್ಟಿ ಬರೋಡ ಅವರ ಉದ್ಘಾಟನೆಯೊಂದಿಗೆ ಡಿಸೆಂಬರ್ 4 ರಂದು ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ , ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ದುರ್ಗಾ ಫುಡ್ ಇಂಡಸ್ಟ್ರೀಸ್ ಮಡಂತ್ಯಾರು ಉಮೇಶ್ ಶೆಟ್ಟಿ, ಶ್ರೀ ಕ್ಷೇತ್ರ ಅರಮಲೆ ಬೆಟ್ಟ ಆಡಳಿತ ಮುಕ್ತೇಶ್ವರರಾಗಿರುವ ಸುಕೇಶ್ ಕುಮಾರ್ ಜೈನ್ ಕಡಂಬು, ಗುರುವಾಯನ ಕೆರೆಯ ವೈಭವ್ ಏಜೆನ್ಸಿ ಯ ಸೀತಾರಾಮ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರೇಮನಾಥ್ ಶೆಟ್ಟಿ ಇವರ ಮಾಲಕತ್ವದಲ್ಲಿ ಆರಂಭಗೊಂಡ ಅನುಗ್ರಹ ಎಂಟರ್ಪ್ರೈಸಸ್ ನಲ್ಲಿ ಫ್ಲೆಕ್ಸ್, ನೇಮ್ ಬೋರ್ಡ್, ಲೇಸರ್ ಕಟಿಂಗ್, ವಿಸಿಟಿಂಗ್ ಕಾರ್ಡ್ ಇನ್ನಿತರ ಡಿಜಿಟಲ್ ಸೈನ್ ಬೋರ್ಡ್ ಗಳನ್ನು ಮಾಡಿಕೊಡಲಾಗುತ್ತದೆ. ಅಡ್ವಾನ್ಸ್ಡ್ ಯಂತ್ರೋಪಕರಣಗಳನ್ನು ಒಳಗೊಂಡ ಸಂಸ್ಥೆ ಗ್ರಾಹಕರ ಬೇಡಿಕೆಗಳನ್ನು ಪೂರೈಸಲಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಸಂಸ್ಥೆ ಶಕ್ತಿನಗರದ ನವಶಕ್ತಿಯ ಮುಂಭಾಗ ಕಾರ್ಯನಿರ್ವಹಿಸುತ್ತಿದ್ದು ಇನ್ನು ಮುಂದೆ ಶಕ್ತಿನಗರದ ಬಸ್ ಸ್ಟಾಪ್ ಬಳಿ ಇರುವ ವಾಣಿಜ್ಯ ಸಂಕೀರ್ಣದಲ್ಲಿ ತನ್ನ ಕಾರ್ಯ ಚಟುವಟಿಗಳನ್ನು ಮುಂದುವರಿಸಲಿದೆ.