ವೇಣೂರು: ಸ.ಉ.ಪ್ರಾ.ಶಾಲೆ ಅಂಡಿಂಜೆ – ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 1,50,000/- ನೆರವು

0

p>

ವೇಣೂರು: ಸ.ಉ.ಪ್ರಾ.ಶಾಲೆ ಅಂಡಿಂಜೆ ಶಾಲೆಯ ಭೋಜನಾಲಯ ಹಾಗೂ ಸಭಾಭವನ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರೂ. 1,50,000/- ಅನುದಾನ ಮಂಜೂರಾತಿ ನೀಡಿದ್ದು, ಮಂಜೂರಾತಿ ಪತ್ರ ವಿತರಣೆಯನ್ನು ವೇಣೂರು ವಲಯ ಮೇಲ್ವಿಚಾರಕಿ ಶಾಲಿನಿ ಮತ್ತು ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಮೋಹನ್ ಅಂಡಿoಜೆ ಶಾಲಾ ಸಮಿತಿಯವರಿಗೆ ವಿತರಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಶಿವಶಂಕರ್ ಭಟ್, ಎಸ್. ಡಿ. ಎಂ. ಸಿ ಅಧ್ಯಕ್ಷ ರಮೇಶ್ ಬಂಗೇರ ಮತ್ತು ಶಾಲಾ ಎಲ್ಲಾ ಶಿಕ್ಷಕ ವೃಂದದವರು, ಆನಂದ ಕುಲಾಲ್ ಶ್ರೀ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷರು, ಪ್ರಗತಿ ಬಂಧು ಎ ಮತ್ತು ಬಿ ಒಕ್ಕೂಟದ ಅಧ್ಯಕ್ಷರು ಯಶೋಧರ ಮತ್ತು ಸುಲೋಚನ, ಸೇವಾಪ್ರತಿನಿಧಿ ಭಾಗ್ಯ, ಒಕ್ಕೂಟದ ಕಾರ್ಯದರ್ಶಿ ಪಂಚಾಯತ್ ಸದಸ್ಯರು ಸುರೇಶ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here