

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ. 30 ರಂದು ಪೋಷಕರಿಗೆ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು. ಕ್ರೀಡಾಕೂಟದಲ್ಲಿ ಅಪಾರ ಸಂಖ್ಯೆಯಲ್ಲಿ ಪೋಷಕರು ಆಸಕ್ತಿಯಿಂದ ಭಾಗವಹಿಸಿ ಮಕ್ಕಳಂತೆ ಆಟವಾಡಿ ಆನಂದಿಸಿದರು.

ಪೋಷಕರಿಗೆ ಓಟದ ಆಟ, ಗುಂಡಿಸೆತ, ಹಗ್ಗ ಜಗ್ಗಾಟ, ಹಾಗೂ ಅದೃಷ್ಟದ ಆಟಗಳನ್ನು ಏರ್ಪಡಿಸಲಾಯಿತು. ವಿಜೇತರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ವಂ ಫಾ ಕ್ಲಿಫರ್ಡ್ ಪಿಂಟೋ ಪೋಷಕರ ಆಸಕ್ತಿ ಮತ್ತು ಸಹಕಾರಕ್ಕೆ ಅಭಿನಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಸಹಕರಿಸಿದರು.