



ಉಜಿರೆ: ಅಂತರ್ ಕಾಲೇಜು ಮಟ್ಟದ ವಾಲಿಬಾಲ್ ಪಂದ್ಯಾವಳಿಯು ತ್ರಿಷಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ನ. 27 ರಂದು ನಡೆಯಿತು. ಎಸ್. ಡಿ. ಎಂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಶಿಪ್ ಪಟ್ಟವನ್ನು ಅಲಂಕರಿಸಿಕೊಂಡಿದ್ದಾರೆ.


ಬೆಸ್ಟ್ ಅಟ್ಯಾಕರ್ ಪ್ರತೀಕ್ ಶೆಟ್ಟಿ ಪ್ರಥಮ ಬಿ.ಕಾಂ, ಮಾಲತೇಶ್ ಪ್ರಥಮ ಬಿ.ಎ ಬೆಸ್ಟ್ ಸೆಟ್ಟರ್ ಪದಕವನ್ನು ಪಡೆದುಕೊಂಡಿದ್ದಾರೆ. ತರಬೇತಿಯನ್ನು ನೀಡಿದ ಸುದೀನ ಹಾಗೂ ಎಸ್. ಡಿ .ಎಂ ಕಾಲೇಜಿನ ಕ್ರೀಡಾ ವಿಭಾಗದ ಕಾರ್ಯದರ್ಶಿ ರಮೇಶ್ ಹೆಚ್ ಸಹಕರಿಸಿದರು.









