ವೇಣೂರು: ಪಲ್ಗುಣಿ ನದಿಗೆ ಈಜಲು ಇಳಿದ ಮೂವರು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮೃತ್ಯು

0

ಬೆಳ್ತಂಗಡಿ: ವೇಣೂರಿನ ನಿಟ್ಟಡೆ ಗ್ರಾಮದ ನರ್ತಿಕಲ್ಲು ಎಂಬಲ್ಲಿರುವ ಪಲ್ಗುಣಿ ನದಿಯ ಡ್ಯಾಮ್‌ನಲ್ಲಿ ಸ್ನಾನ ಮಾಡಲು ಇಳಿದ ಮೂವರು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು
ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನ.27ರಂದು ಸಂಜೆ ನಡೆದಿದೆ.

ನರ್ತಿಕಲ್ಲು ಮನೆಯ ವಾಲ್ಟಿ ಎಂಬವರ ಮನೆಯಲ್ಲಿ ಹಬ್ಬಕ್ಕೆ ಬಂದಿದ್ದ ಐವರು ಸ್ಥಳೀಯ ಬರ್ಕೆಜೆ ಡ್ಯಾಮ್ ನೋಡಿ ಬರುತ್ತೇವೆ ಎಂದು ಹೋಗಿ ಸ್ನಾನ ಮಾಡಲು ನದಿಗೆ ಇಳಿದಿದ್ದರು. ಈ ವೇಳೆ ನದಿಯ ನೀರಿನಲ್ಲಿ ಮುಳುಗಿ ಬಸವನ ಗುಡಿ ಸೂರಜ್(19), ಕಡಬೆಟ್ಟು ವಗ್ಗ ಜೈಸನ್(19) ಮತ್ತು ಕುಪ್ಪೆಪದವು ಲಾರೆನ್ಸ್ (21)ಮೃತಪಟ್ಟಿದ್ದಾರೆ. ಮೃತ ಮೂವರೂ ಮಂಗಳೂರಿನ‌ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಇವರೊಂದಿಗೆ ಬಂದಿದ್ದ ಇಬ್ಬರು ಯುವಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮೃತರು ಎಡಪದವು, ಬಂಟ್ವಾಳದ ವಗ್ಗ ಮತ್ತು ಮಡಂತ್ಯಾರು ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ವೇಣೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

p>

LEAVE A REPLY

Please enter your comment!
Please enter your name here