ಬೆಳ್ತಂಗಡಿ: ಪುತ್ತೂರಿನ ಕಲ್ಲಾರೆ ಮುಖ್ಯರಸ್ತೆಯ ಪವಾರh ಕಾಂಪ್ಲೆಕ್ಸ್‌ನಲ್ಲಿರುವ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ೩ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಅವಧಿಯಲ್ಲಿ ಇದುವರೆಗೆ 65 ಶಿಬಿರದ ಮೂಲಕ 24990 ಜನರಿಗೆ ಸುಮಾರು 1,35,115 ಉಚಿತ ಥೆರಪಿ ನಡೆಸಿರುವ ಸಂಸ್ಥೆ ಬೆಳ್ತಂಗಡಿ ತಾಲೂಕಿನಲ್ಲಿ 18 ಶಿಬಿರದ ಮೂಲಕ 10,480 ಜನರಿಗೆ ಸುಮಾರು 40 ಸಾವಿರಕ್ಕೂ ಅಧಿಕ ಉಚಿತ ಥೆರಪಿ ನಡೆಸಿದೆ. ಮುಂದಿನ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಉಜಿರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನ.28ರಿಂದ ಡಿ.12ರವರೆಗೆ ನಡೆಯಲಿದೆ.
ಯಾವುದೇ ಔಷಧಿಯಿಲ್ಲದೆ ದೇಹದ ರಕ್ತ ಸಂಚಾರ ಸುಲಭ ರೀತಿ ಆಗುವ ಮೂಲಕ ಸುಮಾರು ೧೨೦ ಕಾಯಿಲೆಗಳಿಗೆ ಸರಳ, ಸುಲಭ ರೀತಿಯ ಪರಿಹಾರ ನೀಡುತ್ತಿರುವ ಫೂಟ್ ಪಲ್ಸ್ ಥೆರಪಿ ಸಕ್ಕರೆ ಕಾಯಿಲೆಯಿಂದ ಬರುವ ಪಾದದ ಉರಿ ಹಾಗೂ ಕೀಲು ನಿವಾರಣೆ, ಮಾಂಸಖಂಡಗಳ ಸೆಳೆತದಿಂದ ಮುಕ್ತಿ, ರಕ್ತ ಪರಿಚಲನೆಯ ಸುಧಾರಿಕೆ ಮಾಡುತ್ತದೆ. ಅಲ್ಲದೆ ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್ ವೇನ್, ಸ್ನಾಯು ಸೆಳೆತ, ಊತ, ಸಯಾಟಿಕಾ, ಸರ್ವಿಕಲ್ ಸ್ಟಾಂಡಿಲೈಟಿಸ್, ಪಾರ್ಕಿನ್‌ಸನ್, ನಿದ್ರಾಹೀನತೆ, ಪಾರ್ಶ್ವವಾಯು, ಬೆನ್ನುನೋವು ಹಾಗೂ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ವೈದ್ಯಕೀಯವಾಗಿ ಪ್ರಮಾಣಿತವಾಗಿದೆ ಎಂದು ನೆಮ್ಮದಿ ವೆಲ್‌ನೆಸ್ ಸೆಂಟರ್ ಮಾಲಕ ಕೆ. ಪ್ರಭಾಕರ ಸಾಲ್ಯಾನ್ ತಿಳಿಸಿದ್ದಾರೆ.