ಬೆಳಾಲು: ಗೌಡರ ಯಾನೆ ಒಕ್ಕಲಿಗರ ಸಂಘದ ವಾರ್ಷಿಕ ಕ್ರೀಡಾ ಕೂಟ

0

ಬೆಳಾಲು: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ ನ. 24ರಂದು ನಡೆಯಿತು. ಕ್ರೀಡಾ ಕೂಟವನ್ನು ಊರ ಗೌಡರಾದ ನೀಲಯ್ಯ ಗೌಡ ಭೀಮಂಡೆ ಮನೆ ಮತ್ತು ಬಾಬು ಗೌಡ ಗಣಪಣ ಗುತ್ತು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಪೋಲಿಸ್ ಇಲಾಖೆಯ ವೈಶಾಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ವಿಜಯ ಗೌಡ ಸೌತೆಗದ್ದೆ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ವೇದಿಕೆಯ ಅಧ್ಯಕ್ಷೆ ಕನ್ನಿಕಾ ಪದ್ಮ ಗೌಡ ತಾಲೂಕು ಮಹಿಳಾ ವೇದಿಕೆ ಕಾರ್ಯದರ್ಶಿ ಲೀಲಾ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲತಾ ಕೇಶ ಗೌಡ ನಿರೂಪಿಸಿದರು. ಸೀತಾರಾಮ ಗೌಡ ಸ್ವಾಗತಿಸಿದರು. ಕ್ರೀಡಾಕೂಟ ನಿರ್ವಹಣೆಯನ್ನು ಗ್ರಾಮ ಸಮಿತಿ ಕಾರ್ಯದರ್ಶಿ ಧರ್ಮೇಂದ್ರ ಗೌಡ ಮಾಡಿದರು. ಗ್ರಾಮ ಸಮಿತಿಯ ಗೌರಧ್ಯಕ್ಷರಾದ ಸುರೇಂದ್ರ ಗೌಡ, ಗ್ರಾಮ ಸಮಿತಿ ಗ್ರಾಮದ ಉಸ್ತುವಾರಿ ಉಷಾ ವೆಂಕಟರಮಣ ಸಹಕರಿಸಿದರು.

ಕ್ರೀಡೋತ್ಸವ ಊಟದ ವ್ಯವಸ್ಥೆಯನ್ನು ಡಾ. ರಜತ್ ಪಿ. ಹೆಚ್. ತ ಶಾಮಿಯಾನದ ವ್ಯವಸ್ಥೆಯನ್ನು ಅರ್ಚನ್ ಸೌತಗದ್ದೆ, ಧ್ವನಿವರ್ಧಕದ ವ್ಯವಸ್ಥೆಯನ್ನ ಸಂದೇಶ್ ಆರಿಕೋಡಿ ಸಹಕರಿಸಿದರು. ಕ್ರೀಡಾಕೂಟದಲ್ಲಿ ಊರ ಗೌಡರು, ಒತ್ತು ಗೌಡರು ಗ್ರಾಮ ಸಮಿತಿ ಹಾಗೂ ವಿವಿಧ ಸ್ಪರ್ಧೆಗಳನ್ನು ಮಾಧವ ಗೌಡ, ಮಹೇಶ್ ಗೌಡ, ನಿಶಾ ಗೌಡ, ಜಯಶ್ರೀ, ಸುರೇಂದ್ರ ಗೌಡ, ಉಮೇಶ್ ಗೌಡ, ಸೀತಾರಾಮ ಗೌಡ, ಯಶೋಧರ ಗೌಡ ಹಾಗೂ ಇನ್ನಿತರರು ನಾಯಕತ್ವವನ್ನು ವಹಿಸಿ ಸಹಕರಿಸದರು.

LEAVE A REPLY

Please enter your comment!
Please enter your name here