ಉಜಿರೆ : ಎಸ್. ಡಿ. ಎಂ. ವಸತಿ ಪದವಿ ಪೂರ್ವ ಕಾಲೇಜು – ‘ಪುಸ್ತಕ ಪ್ರದರ್ಶನ ಕಾರ್ಯಕ್ರಮ’

0

ಉಜಿರೆ: ಪುಸ್ತಕದಂತಹ ಉತ್ತಮ ಗೆಳೆಯ ಬೇರಾರು ಇರರು. ಓದುಗಾರಿಕೆ ನಮ್ಮೆಲ್ಲಾ ಸಮಸ್ಯೆಗಳಿಗೆ, ಸಾಧನೆಗೆ ಸೂಕ್ತ ಉತ್ತರ ಒದಗಿಸಿಕೊಡುವುದು. ಜ್ಞಾನವಂತ ಜನಗಳ ಸಂಘ ನಮಗೆ ಬದುಕಿನ ಬವಣೆಗಳಿಂದ ಹೊರಬರಲು ಸೂಕ್ತ ಮಾರ್ಗ ತೋರಿಸುವಂತೆ, ಜ್ಞಾನಿಗಳಿಗೆ ಪುಸ್ತಕವೇ ದಾರಿದೀಪ.


ಪೂಜ್ಯರ ಬದುಕು, ಸಾಧನೆಗಳು ನಮಗೆ ಸರ್ವಕಾಲಕ್ಕೂ ಮಾರ್ಗದರ್ಶಿ. ಅವರೂ ಪುಸ್ತಕ ಪ್ರೇಮಿ, ಅಗಾಧ ಜ್ಞಾನ ಭಂಡಾರ ಹೊಂದಿರುವ ಪೂಜ್ಯರು ಬಹಳಷ್ಟು ಪುಸ್ತಕ ಬರೆದಿದ್ದು, ಬರೆಯುವ ಮನಸ್ಸುಗಳಿಗೆ ಸ್ಫೂರ್ತಿಯೂ ಆಗಿದ್ದಾರೆ. ವಿದ್ಯಾರ್ಥಿಗಳು ಓದುವ ಹವ್ಯಾಸ ಒಡಮೂಡಿಸಿಕೊಳ್ಳಿಯೆಂದು ತಾಂತ್ರಿಕ ಮಹಾವಿದ್ಯಾಲಯದ ಮುಖ್ಯ ಗ್ರಂಥ ಪಾಲಕಿ ರಜತ ಶೆಟ್ಟಿ ಹೇಳಿದರು, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜೀವನ ಮೌಲ್ಯಧಾರಿತ ಹಾಗೂ ಸಾಧನೆ – ಕೊಡುಗೆ ಸಂಬಂಧಿ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.

ಈಗಿನ ಕಲಿಕಾರ್ಥಿಗಳಿಗೂ, ಬೋಧಕರಿಗೂ ಮಾರಕವಾಗಿರುವ ಮೊಬೈಲ್ ಗೀಳಿನಿಂದ ಹೊರ ಬಂದು ಪುಸ್ತಕದ ಗೀಳು ಹಚ್ಚಿಕೊಂಡರೆ ಅರೋಗ್ಯ, ಮನಸ್ಸು ಸ್ವಚ್ಛಂದವಾಗಿ ಜ್ಞಾನ ಮಾರ್ಗದತ್ತ ಸಾಗುವುದೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಮನೀಶ್ ಕುಮಾರ್ ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಕೃತ ಉಪನ್ಯಾಸಕ ಮಹೇಶ್ ಎಸ್. ಎಸ್. ವಂದಿಸಿದರು. ಗಣಿತ ಉಪನ್ಯಾಸಕ ಕೃಷ್ಣ ಪ್ರಸಾದ್.ಆರ್ ನಿರೂಪಿಸಿದರು.

p>

LEAVE A REPLY

Please enter your comment!
Please enter your name here