ಕಡಿರುದ್ಯಾವರ: ಗ್ರಾಮಿಣ ಗ್ರಂಥಾಲಯಗಳು ಸಾರ್ವಜನಿಕರ ಜ್ಞಾನದಾಹವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಓದುಗರಿಗೆ ಸಹಾಯಕವಾಗುವಂತೆ ಪುಸ್ತಕಗಳೊಂದಿಗೆ, ಡಿಜಿಟಲೀಕರಣಗೊಂಡ ಸಂಪನ್ಮೂಲಗಳನ್ನು ಹಾಗೂ ಉದ್ಯೋಗ ಕುರಿತ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭವನಿಶಂಕರ್ ಹೇಳಿದರು
ನ. 22ರಂದು ಕಡಿರುದ್ಯಾವರ ಗ್ರಾಮ ಪಂಚಾಯತ್ ನಲ್ಲಿ ನೂತನ ಗ್ರಂಥಾಲಯನ್ನು ಉದ್ಘಾಟಿಸಿ ಮಾತಾನಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನಾವತಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಸಾಮಿತ್ರಿ, ಸರ್ವಸದಸ್ಯರು, NRML ತಾಲೂಕು ಸಂಯೋಜಕರಾದ ಜಯಾನಂದ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಾದ ಲೋಕೇಶ್ವರಿ ವಿನಯಚಂದ್ರ, ಪ್ರಭಾಕರ ಶೆಣೈ, ವರದಾಬಾಯಿ, ವನಿತಾ, ಆಶಾ ಅಡೂರು, ಸುರೇಶ ನಾಯ್ಕ, ಜನಾರ್ಧನ ಕೆ., ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ನಿಂಗಣ್ಣ ಗೌಡ, ಕಾರ್ಯದರ್ಶಿ ಜನಾರ್ಧನ ಗೌಡ , ಪಂಚಾಯತ್ ಸಿಬ್ಬಂದಿ ವರ್ಗ ಸಂಜೀವಿನಿ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ನಿಂಗಣ್ಣ ಗೌಡ ಸ್ವಾಗತಿಸಿ, ವಂದಿಸಿದರು .