ರೋಟರಿ ಕ್ಲಬ್ ವತಿಯಿಂದ ಯೂತ್ ಕಾರ್ನಿವಲ್ ಕಾರ್ಯಕ್ರಮ- ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆ

0

ಉಜಿರೆ: “ನಮ್ಮಲ್ಲಿರುವ ಶಕ್ತಿ, ಸ್ವಾಭಿಮಾನವನ್ನು ಸಮಾಜ ಗುರುತಿಸುವಂತೆ ಕೆಲಸ ಮಾಡಬೇಕು. ನಾಯಕತ್ವದೊಂದಿಗೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ರೋಟರಿ ಕ್ಲಬ್ ಸೂಕ್ತ ವೇದಿಕೆಯಾಗಿದೆ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ನ. 17 ರಂದು ಉಜಿರೆ ಎಸ್ ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಜರಗಿದ ಯೂತ್ ಕಾರ್ನಿವಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಪಡೆದಂತಹ ಉತ್ತಮ ಅವಕಾಶಗಳನ್ನು ಇತರರಿಗೂ ಹಂಚಿ, ಸಮಾಜಕ್ಕೆ ಸಂಸ್ಕೃತಿ, ಸಂಸ್ಕಾರವನ್ನು ನೀಡಿ ಜೀವನವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾವು ಮಾಡುವ ಸಣ್ಣ ಸೇವೆಗಳೇ ಭವಿಷ್ಯದಲ್ಲಿ ಉತ್ತಮ ಸೇವೆಗಳನ್ನು ನೀಡಲು ಪ್ರೇರಣೆಯಾಗುತ್ತವೆ. ಭಗವಂತ ಕೊಟ್ಟಿರುವ ದೇಹದಲ್ಲಿ ನಮ್ಮ ಸ್ಮೃತಿ ಅಡಗಿರುತ್ತದೆ. ಅದನ್ನು ಸದ್ವಿನಿಯೋಗಗೊಳಿಸಬೇಕು. ಸೇವೆ ಮಾಡುವ ಮೂಲಕ ಸಮಾಜಕ್ಕೆ ಧನ್ಯವಾದ ಅರ್ಪಿಸಬೇಕು” ಎಂದು ಹೇಳಿದರು.

ಗವರ್ನರ್ ನಾಮಿನಿ ಸತೀಶ್ ಬೋಳಾರ್ ಮಾತನಾಡಿ “ಭಗವಂತ ನೀಡಿದ ಬದುಕನ್ನು ರೂಪಿಸಿಕೊಳ್ಳುವ ಅವಕಾಶ ನಮ್ಮಲ್ಲಿದೆ. ಗುರುಹಿರಿಯರನ್ನು, ಪೋಷಕರನ್ನು, ಸಮಾಜ, ದೇಶಕ್ಕೆ ಹಿತ ಬಯಸುವವರನ್ನು ಸದಾ ಗೌರವಿಸಬೇಕು. ರೋಟರಿ ಮೌಲ್ಯಧಾರಿತ ಜೀವನ, ನಾಯಕತ್ವ ಗುಣವನ್ನು ರೂಪಿಸುತ್ತದೆ” ಎಂದು ಹೇಳಿದರು.

ಜಿಲ್ಲಾ ಗವರ್ನರ್ ವಿಕ್ರಂ ದತ್ತ ಮಾತನಾಡಿ 1905ರಲ್ಲಿ ಆರಂಭವಾದ ರೋಟರಿ ಕ್ಲಬ್ ಇಂದು 220 ದೇಶಗಳಿಗೆ ವಿಸ್ತರಿಸಿದ್ದು, 3500 ಕ್ಲಬ್ 11.50 ಲಕ್ಷ ಸದಸ್ಯರನ್ನು ಹೊಂದಿದೆ. ಅನೇಕ ಸಮಾಜ ಸೇವೆಗಳಿಗೆ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿದೆ” ಎಂದು ಹೇಳಿದರು.
ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ., ಡಿಐಆರ್ ಲಿಖಿತಾ ಸಾಲಿಯಾನ್, ಜಿಲ್ಲಾ ಕೌನ್ಸಿಲರ್ ದೇವದಾಸ ರೈ, ರೋಟರಿ ಕ್ಲಬ್ ಎಜಿ ಮಹಮ್ಮದ್ ಒಳವೂರು, ಜಯರಾಮ್, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ಜಿಲ್ಲಾ ಚೇರ್ಮನ್ ಜಯಕುಮಾರ್ ಶೆಟ್ಟಿ, ವಲಯ ಸೇನಾನಿ ಮನೋರಮಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಸ್ವಾಗತಿಸಿದರು. ಕಾರ್ಯದರ್ಶಿ ಸಂದೇಶ್ ರಾವ್ ವಂದಿಸಿದರು. ಧನಂಜಯ ರಾವ್ ಮತ್ತು ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here