ಉಜಿರೆ : ಉಜಿರೆ ಗ್ರಾಮ ಪಂಚಾಯತಿನ 8ನೇ ವಾರ್ಡ್ ನ ಒಂದು ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರೇಮಲತಾ ನ. 12 ರಂದು ಚುನಾವಣಾಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಇವರಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಚುನಾವನಾ ಉಸ್ತುವಾರಿ ವಕೀಲ ಸಂತೋಷ ಬಿ. ಎಲ್.ಲಾಯಿಲ, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಶ್ರೀಧರ ಪೂಜಾರಿ, ಶ್ರೀನಿವಾಸ, ಬಾಲಕೃಷ್ಣ ಗೌಡ, ಸದಸ್ಯರುಗಳಾದ ಇಲಿಯಾಸ್ ಬಿ. ಎಂ, ಅನಿಲ್ ಡಿಸೋಜ, ಮಹಮ್ಮದ್ ಶರೀಫ್, ನಾಗವೇಣಿ, ಶೋಭಾ, ಮಾಜಿ ಉಪಾಧ್ಯಕ್ಷೆ ವಿನುತಾ ರಜತ ಗೌಡ, ಮಾಜಿ ಸದಸ್ಯ ಮಂಜಪ್ಪ ಪೂಜಾರಿ, ಬೂತ್ ಸಮಿತಿ ಅಧ್ಯಕ್ಷ ರಮೇಶ್, ರಜತ ಗೌಡ ಮೊದಲಾದವರು ಹಾಜರಿದ್ದರು
p>