ಮಿತ್ತಬಾಗಿಲು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಹೈದರಾಲಿ ಕಾಜೂರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಗಣೇಶ ಪಗರೆರವರ ಅದ್ಯಕ್ಷತೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಿತಿ ರಚಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಶ್ರೀಮತಿ ಇಂದಿರಾ ಕುಮಾರಿ ಮಾರ್ಗದರ್ಶನ ನೀಡಿದರು. 1949ರಲ್ಲಿ ಆರಂಭವಾದ ನಮ್ಮ ಶಾಲೆಗೆ 75ವರ್ಷವಾಯಿತು. ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಆಚರಿಸುವ (1949–2024) ಸಮಯ ಕೂಡಿ ಬಂದಿದೆ ಎಂದು ಎಸ್. ಡಿ. ಎಮ್. ಸಿ. ಅಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು. ಈ ಶಾಲೆ ಅಭಿವೃದ್ದಿ ಪಡಿಸುವುದೇ ನಮ್ಮ ಉದ್ದೇಶ ಅದಕ್ಕೆ ಊರವರ ಸಹಕಾರ ಅತ್ಯಗತ್ಯ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ತಿಳಿಸಿದರು. ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರು ಡಿ. ಎಚ್. ಮುಸ್ತಫಾ ಕಾಜೂರು, ಪ್ರಧಾನ ಕಾರ್ಯದರ್ಶಿ ಚರಣ್ ಕೆರೆಕೋಡಿ, ಕೋಶಧಿಕಾರಿ ಕೆ. ಯಶೋಧರ ಗೌಡ ಆಚರಿಬೊಟ್ಟು, ಉಪಾಧ್ಯಕ್ಷರು ಮುಜೀಬ್ ಕಾಜೂರು, ಕಾರ್ಯದರ್ಶಿ ಸುಂದರ ಗೌಡ ಕೋಡಿರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಿತ್ತಬಾಗಿಲು ಗ್ರಾಮ ಪಂಚಾಯತ್ ಸದಸ್ಯರು ಅಹ್ಮದ್ ಕಬೀರ್ ರವರನ್ನು ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು ಎಸ್. ಡಿ. ಎಮ್. ಸಿ. ಮಾಜಿ ಅಧ್ಯಕ್ಷರು. ಪಿ. ಎ. ಮಹಮ್ಮದ್,ಲೋಕಯ್ಯ ಗಣೇಶ ನಗರ,ಟಿ. ಎ.ಮಹಮ್ಮದ್ ಕಾಜೂರು ರವರನ್ನು ಸಲಹೆ ಗಾರ ರಾಗಿ ಆಯ್ಕೆ ಮಾಡಲಾಯಿತು.
21 ಜನರು ಸದಸ್ಯರಾಗಿ ಆಯ್ಕೆಯಾದರು. ಡಿಸೇಂಬರ್ 27ರಂದು ವಾರ್ಷಿಕೋತ್ಸವ ಮಾಡುವುದಾಗಿ ತೀರ್ಮಾನಿಸಲಾಯಿತು.
ಮಿತ್ತಬಾಗಿಲು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಿತಿ ರಚನೆ
p>