ಧರ್ಮಸ್ಥಳ: ಶಂಕರ ಹೆಸರಿನ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ಧರ್ಮಸ್ಥಳದ ಗಾಯತ್ರಿ ವಸತಿಗೃಹಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ನ.10ರಂದು ರಾತ್ರಿ ಸಮಯ ಯಾವುದೋ ಖಾಯಿಲೆಯಿಂದ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ 108 ಅಂಬ್ಯುಲೆನ್ಸ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ. ಮೃತದೇಹವನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಶವಗಾರದಲ್ಲಿ ವಾರೀಸುದಾರರ ಪತ್ತೆಯ ಬಗ್ಗೆ ಇರಿಸಲಾಗಿದೆ. ಮೃತರ ವಾರೀಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆ: 8277986447 ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರು: 9480805336 ನಂಬರಿಗೆ ಮಾಹಿತಿ ನೀಡುವುದು.
p>