




ಕೊಕ್ಕಡ: ಕರ್ನಾಟಕ ಪಬ್ಲಿಕ್ ಶಾಲೆ ಪುಂಜಾಲಕಟ್ಟೆ ಇಲ್ಲಿ ನ.6ರಂದು ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಕೊಕ್ಕಡ ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ 19 ವಿದ್ಯಾರ್ಥಿಗಳು ಭಾಗವಹಿಸಿದ್ದು ಪ್ರೌಢ ಶಾಲಾ ವಿಭಾಗದ ಭರತನಾಟ್ಯದಲ್ಲಿ ಸನೂಷಾ ಪ್ರಥಮ ಸ್ಥಾನ, ಪ್ರಾಥಮಿಕ ವಿಭಾಗದ ಸಂಸ್ಕೃತ ಪಠಣದಲ್ಲಿ ಸ್ಪಂದನಾ ಪ್ರಥಮ ಸ್ಥಾನ ಹಾಗೂ ಭಕ್ತಿ ಗೀತೆಯಲ್ಲಿ ಪ್ರಾಂಜಲ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಅದೇ ರೀತಿ ಓಂಕಾರ್ ಗೋಖಲೆ ಸಂಸ್ಕೃತ ಪಠಣದಲ್ಲಿ ದ್ವಿತೀಯ ಸ್ಥಾನ, ದಿಶಾ ಕೆ.ಎಸ್. ಭಾವಗೀತೆಯಲ್ಲಿ ದ್ವಿತೀಯ ಸ್ಥಾನ, ಅದಿತಿ ಹಿಂದಿ ಕಂಠಪಾಠದಲ್ಲಿ ತೃತೀಯ ಸ್ಥಾನ, ಧನ್ವಿತ್ ಆಶುಭಾಷಣದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.









