ಕಳಿಯ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಯಕ್ಷಾರಾಧನ ಕಲಾ ಪ್ರತಿಷ್ಠಾನ ನಾಳ -ಗೇರುಕಟ್ಟೆ ಇದರ ಸಹಯೋಗದೊಂದಿಗೆ ಯಕ್ಷೋತ್ಸವ ಕಾರ್ಯಕ್ರಮ ನ.9ರಂದು ಗೇರುಕಟ್ಟೆ ಮಂಜಲಡ್ಕ ಗಣೇಶೋತ್ಸವ ಸಭಾಭವನದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ನಾಳದ ಪ್ರಧಾನ ಅರ್ಚಕ ವೇ.ಮೂ.ರಾಘವೇಂದ್ರ ಅಸ್ರಣ್ಣ ಉದ್ಘಾಟಿಸಿದರು. ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ., ಅಧ್ಯಕ್ಷತೆ ವಹಿಸಿದ್ದರು. ಗೇರುಕಟ್ಟೆ ಜ್ಯೋತಿ ಕ್ಲಿನಿಕ್ ನ ವೈದ್ಯ ಅನಂತ್ ಭಟ್, ನಿವೃತ್ತ ರೈಲ್ವೇ ಅಧಿಕಾರಿ ಬೆಂಗಳೂರು ಕೃಷ್ಣ ಕೆ., ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮತ್ತು ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತಾರಾನಾಥ ಗಟ್ಟಿ ಕಾಪಿಕಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಮಹಾವೀರ್ ಮತ್ತು ವಿಜಯ್ ಉಪಸ್ಥಿತರಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ರಾಘವ ಹೆಚ್. ಸಹಕರಿಸಿದರು.
ಯಕ್ಷ ಭಜನೆ:
ಪುಂಜಾಲಕಟ್ಟೆ ಗಣೇಶ್ ಮತ್ತು ತಂಡದಿಂದ ಯಕ್ಷಭಜನೆ ನಡೆಯಿತು. ಭಾಗವತರಾಗಿ ಗಣೇಶ್ ಪುಂಜಾಲಕಟ್ಟೆ, ಜಗದೀಶ್ ಚಾರ್ಮಾಡಿ, ಚೆಂಡೆ ಮದ್ದಳೆ ವಿಶ್ವನಾಥ್ ಆಚಾರ್ಯ ವಾಮದಪದವು ಹಾಗೂ ಚಂದ್ರಶೇಖರ್ ಗೇರುಕಟ್ಟೆ ಮುನ್ನಡೆಸಿದರು.