ಬೆಳ್ತಂಗಡಿ: ಶ್ರೀ ಕ್ಷೇ. ಧ. ಗ್ರಾ. ಯೋಜನೆ ಕೊಕ್ಕಡ ವಲಯದ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಕೊಕ್ಕಡ ವಲಯದ ಹಳ್ಳಿoಗೇರಿ ಸಮುದಾಯ ಭವನದಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯೆ ಪವಿತ್ರ ಉದ್ಘಾಟನೆ ಮಾಡಿ, ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಉತ್ತಮ ಅವಕಾಶವಿದ್ದು ನಾವು ತರಬೇತಿಗಾಗಿ ಸಮಯ ಮೀಸಲಿಟ್ಟು ಶ್ರದ್ದೆಯಿಂದ ಭಾಗವಹಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಂಚಮಿ ಹಿತಾರ್ಯೂಧಾಮ ಆಸ್ಪತ್ರೆಯ ವೈಧ್ಯಾದಿಕಾರಿ ತಾರಾ ಮಾತನಾಡುತ್ತಾ, ಮಾತೃಶ್ರೀ ಅಮ್ಮನವರು ಎಲ್ಲಾ ಮಹಿಳೆಯರು ಸ್ವಉದ್ಯೋಗ ಮಾಡಲು ಪ್ರೇರಣೆಯನ್ನು ನೀಡುವ ಉದ್ದೇಶದಿಂದ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಅವಕಾಶಗಳನ್ನು ನೀಡುತ್ತಿದ್ದು, ಅದಕ್ಕೆ ಪೂರಕವಾಗಿ ನಮ್ಮ ಊರಿನ ಮಹಿಳೆಯರಿಗೆ ಉಚಿತ ತರಬೇತಿ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದು ಉತ್ತಮ ರೀತಿಯಲ್ಲಿ ಭಾಗವಹಿಸುವಂತೆ ತಿಳಿಸಿದರು.

ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿ ಸುರೇಂದ್ರ ಅವರು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ನಡೆಸಲಾಗುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಾ, ಹೊಲಿಗೆ ತರಬೇತಿ ಕಾರ್ಯಕ್ರಮ ಈ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು ಟೈಲರಿಂಗ್ ಉದ್ಯಮಕ್ಕೆ ಬಹಳಷ್ಟು ಅವಕಾಶಗಳಿದ್ದು ನಮ್ಮ ಸಿರಿ ಸಂಸ್ಥೆಯಲ್ಲಿಯೂ ಉದ್ಯೋಗಾವಕಾಶಗಳಿದ್ದು ಎಲ್ಲರೂ ತರಬೇತಿಗೆ ಸಮಯಕ್ಕೆ ಸರಿಯಾಗಿ ಭಾಗವಹಿಸಿ ಉತ್ತಮ ತರಬೇತಿ ಪಡೆದು ಸ್ವಉದ್ಯೋಗ ಮಾಡುವಂತೆ ತಿಳಿಸಿದರು.

ತರಬೇತಿ ಶಿಕ್ಷಕಿ ಸುಶೀಲ ಅವರು ತರಬೇತಿಗೆ ಬರುವಾಗ ತರಬೇಕಾದ ಪರಿಕರಗಳು ಮತ್ತು ಸಮಯದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಭಾಗೀರಥಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸoತ್ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಕುಸುಮಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಅನಿತಾ ಸ್ವಾಗತಿಸಿ, ರೋಹಿಣಿ ವಂದಿಸಿದರು.

p>

LEAVE A REPLY

Please enter your comment!
Please enter your name here