ಬೆಳ್ತಂಗಡಿ: ಜಿಲ್ಲಾ ವ್ಯಾಪ್ತಿಯ ಸರಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಶ್ರಮದಾನದ ಮೂಲಕ ಸ್ವಚ್ಛ ಹಾಗೂ ದುರಸ್ತಿಗೊಳಿಸಿ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸುವ ರಾಜಕೇಸರಿ ಟ್ರಸ್ಟ್‌ನ ಅಭಿಯಾನ ಮುಂದುವರಿದಿದ್ದು, ಬಂಟ್ವಾಳದಲ್ಲಿ ಆರಂಭಗೊಂಡಿದೆ.
ಅಮ್ಟಾಡಿ ಗ್ರಾಮದ ನಾಲ್ಕೆಮಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪರಿವರ್ತಿತ ಸ್ವಚ್ಛಾಲಯಗಳನ್ನು ನ.4ರಂದು ಉದ್ಘಾಟಿಸಲಾಯಿತು. ರಾಜಕೇಸರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದೀಪಕ್ ಜಿ. ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಉದ್ಘಾಟಿಸಿದರು. ಕಟ್ಟೆಮಾರ್ ಶ್ರೀ ಮಂತ್ರದೇವತೆ ಸಾನಿಧ್ಯ ಕ್ಷೇತ್ರ ಧರ್ಮದರ್ಶಿ ಮನೋಜ್ ಕಟ್ಟೆಮಾರ್, ಬಂಟ್ವಾಳ ಪತ್ರಕರ್ತರ ಸಂಘದ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ, ಬಿ.ಸಿ. ರೋಡ್ ಸಿಟಿ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಸತೀಶ್ ಕುಮಾರ್, ಬಂಟ್ವಾಳದ ಪತ್ರಕರ್ತರಾದ ಹರೀಶ ಮಾಂಬಾಡಿ, ಯಾದವ ಅಗ್ರಬೈಲು, ರಾಜಕೇಸರಿ ಟ್ರಸ್ಟ್ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ, ಜಿಲ್ಲಾ ಸಂಚಾಲಕ ಪ್ರಸಾದ್ ಕುಲಾಲ್, ಬಂಟ್ವಾಳ ಅಧ್ಯಕ್ಷ ಗೌತಮ್ ಪೂಜಾರಿ ನೆಲ್ಲಿಗುಡ್ಡೆ, ಬಸಬೈಲು ಘಟಕದ ಅಧ್ಯಕ್ಷ ರವಿರಾಜ್ ನೆಲ್ಲಿಗುಡ್ಡೆ, ಎಸ್.ಡಿ.ಎಂ.ಸಿ ಅಧ್ಯಕ್ಷ ವಿಜಯ ಕುಮಾರ್, ಮುಖ್ಯೋಪಾಧ್ಯಾಯಿನಿ ಜ್ಯೋತಿ ಕುಮಾರಿ ಉಪಸ್ಥಿತರಿದ್ದರು. ಶೇಖರ್ ಕುಲಾಲ್ ನೆಲ್ಲಿಗುಡ್ಡೆ ಸ್ವಾಗತಿಸಿದರು. ಜಗನ್ನಾಥ ಎ. ಕಾರ್ಯಕ್ರಮ ನಿರೂಪಿಸಿದರು.