ಬೆಳ್ತಂಗಡಿ: ಕೃಷಿ ಇಲಾಖೆಯಲ್ಲಿ ರೈತ ಸ್ನೇಹಿ ಅಧಿಕಾರಿಯಾಗಿ ರಂಜಿತ್ ಕುಮಾರ್ ಟಿ.ಎಂ. ಹೆಸರು ಪಡೆದಿದ್ದರು. ಅವರು ಕೃಷಿ ಪ್ರಧಾನ ಕೃಷಿಕ ಕ್ಷೇತ್ರವಾದ ಬೆಳ್ತಂಗಡಿಯ ರೈತರಿಗೆ, ಸರಕಾರದ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಲು ಸಹಕಾರಿಯಾಗಿದ್ದರು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ್ ಜೈನ್ ಹೇಳಿದರು. ಅವರು ಬೆಳ್ತಂಗಡಿ ಕೃಷಿ ಇಲಾಖೆಯಲ್ಲಿ ನ.5ರಂದು ನಡೆದ ಕೃಷಿ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಟಿ.ಎಂ. ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಸಹಾಯಕ ನಿರ್ದೇಶಕ ರಂಜಿತ್ ಕುಮಾರ್ ಟಿ.ಎಂ. ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ರಾಜುಪೂಜಾರಿ, ಹಿರಿಯ ತೋಟಗಾರಿಕಾ ನಿರ್ದೇಶಕ ಚಂದ್ರಶೇಖರ್, ಮುಖ್ಯ ವೈದ್ಯಾಧಿಕಾರಿ ರವಿಕುಮಾರ್, ಕೃಷಿ ಸಮಾಜದ ಮುನಿರಾಜ್ ಅಜ್ರಿ, ನೂತನ ಸಹಾಯಕ ನಿರ್ದೇಶಕ ವೀರಭದ್ರಪ್ಪ ಸಹಿತ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಶುಭ ಹಾರೈಸಿದರು. ರಂಜಿತ್ ಕುಮಾರ್ ಅವರು ಬೆಂಗಳೂರು ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಫ್ರೂಟ್ಸ್ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ. ನೂತನ ಸಹಾಯಕ ನಿರ್ದೇಶಕರಾಗಿ ಬೆಂಗಳೂರು ಕೃಷಿ ಇಲಾಖೆ ಕಚೇರಿಯಿಂದ ವರ್ಗಾವಣೆಗೊಂಡ ವೀರಭದ್ರಪ್ಪ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.