ವೇಣೂರು: ಎಸ್.ಡಿ.ಎಂ. ಕೈಗಾರಿಕಾ ತರಬೇತಿ ಸಂಸ್ಥೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ವಾರ್ಷಿಕ ಕ್ರೀಡಾಕೂಟ- ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

0

ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ಪ್ರತಿ ವರ್ಷದಂತೆ ದೀಪಾವಳಿಯ ನರಕ ಚತುರ್ದಶಿಯಂದು ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಐಟಿಐ ನಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆ ರ್. ವಹಿಸಿ ಮಾತಾಡುತ್ತಾ ಹಳೆ ವಿದ್ಯಾರ್ಥಿ ಸಂಘವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಂಸ್ಥೆಗೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿರುವುದು ಅಭಿನಂದನೀಯ ಎಂದರು. ಗೌರವ ಉಪಸ್ಥಿತಿಯಲ್ಲಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಸದಾನಂದ ಪೂಜಾರಿ ಮಾತಾಡುತ್ತಾ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆ ವಿದ್ಯಾರ್ಥಿ ಸಂಘ ಎಲ್ಲರಿಗೂ ಮಾದರಿ ಎಂದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿನರಾಜ್ ಜೈನ್ ಮಾತಾಡುತ್ತಾ, ಸಂಸ್ಥೆಯಲ್ಲಿ ಮುಂದೆ ನಡೆಯಲಿರುವ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳಿಗೆ ಹಳೆ ವಿದ್ಯಾರ್ಥಿಗಳು ಸಹಕಾರವನ್ನು ನೀಡಬೇಕೆಂದರು. ಮುಖ್ಯ ಅತಿಥಿ ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳಾದ ಶ್ರೀ ಮಹಾವೀರ ಬ್ಯಾಟರೀಸ್ ನ ಮಾಲಕ ವಸಂತ ಕುಮಾರ್, ಮೊಲೆಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ನ ಪ್ಲಾನಿಂಗ್ ಇಂಜಿನಿಯರ್ ಪ್ರದೀಪ್ ಜೈನ್, ಡಿ ಆರ್ ಡಿ ಓ ಕಂಪನಿಯ ಟೆಕ್ನಿಕಲ್ ಆಫೀಸರ್ ರೋಷನ್ ಲೋಬೋ, ಕತಾರ್ ನ ಎ ಸಿ ಟೆಕ್ನೀಷಿಯನ್ ಮನ್ಸೂರ್ ಹಳೆ ವಿದ್ಯಾರ್ಥಿ ಸಂಘಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕಚೇರಿ ಅಧಿಕ್ಷಕ ಸುರೇಶ್ ದೇವಾಡಿಗ, ತರಬೇತಿ ಅಧಿಕಾರಿ ಪೀಟರ್ ಸಿಕ್ವೇರಾ, ಲಿಖಿತ್ ಎಲೆಕ್ಟ್ರೋ ಪವರ್ ಸರ್ವಿಸ್ ನ ಎ ಗ್ರೇಡ್ ಗುತ್ತಿಗೆದಾರ ಸುಂದರ್ , ಎಸಿಇ ಡಿಸೈನರ್ ನ ಟೆಕ್ನೀಷಿಯನ್ ಜನಾರ್ಧನ ಕುಲಾಲ್ ವಡ್ಡ, ಶ್ರೀ ದುರ್ಗಾಪರಮೇಶ್ವರಿ ಆಟೋ ವರ್ಕ್ ನ ಮಾಲಕ ಗೀತ ಪ್ರಕಾಶ್, ಎಸಿಇ ಕ್ರೇನ್ಸ್ ದುಬೈ ಯ ಟೆಕ್ನೀಷಿಯನ್ ಮನೋಜ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಪ್ರಸಕ್ತ ತರಬೇತಿದಾರರಾಗಿ ವ್ಯಾಸಂಗ ಮಾಡುತ್ತಿರುವ 7 ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಇದೇ ಸಂಧರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ನವೀಕರಣಗೊಂಡ ಉಪನ್ಯಾಸಕರ ಕಚೇರಿಯನ್ನು ಉದ್ಘಾಟಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ತಿಲಕ್ ಕೆ. ಎಸ್., ಹಳೆ ವಿದ್ಯಾರ್ಥಿ ಮಿತ್ರರು, ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳು, ಸಂಸ್ಥೆಯ ಹಿತೈಷಿ ಜಗನ್ನಾಥ ದೇವಾಡಿಗ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಭಾ ಪ್ರಾರ್ಥಿಸಿ, ಕೋಶಾಧಿಕಾರಿ ಪದ್ಮ ಪ್ರಸಾದ್ ಬಸ್ತಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಸತೀಶ್ ನಿರೂಪಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಮಾಣಿಕ್ಯರಾಜ್ ಜೈನ್ ಧನ್ಯವಾದ ಸಮರ್ಪಿಸಿದರು. ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಹಳೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾಟ ನಡೆಸಿ ವಿಜೇತರಿಗೆ ಬಹುಮಾನ ವಿತರಣೆ ನಡೆಸಲಾಯಿತು.

p>

LEAVE A REPLY

Please enter your comment!
Please enter your name here