ಚಾರ್ಮಾಡಿ : ಪಶ್ಚಿಮ ಘಟ್ಟ ವಲಯದ ಕಸ್ತೂರಿರಂಗನ್ ವರದಿ ವಿರುದ್ಧವಾಗಿ ಚಾರ್ಮಾಡಿ ಗ್ರಾಮದ ಹೋರಾಟ ಸಮಿತಿಯನ್ನು ಅ.27ರಂದು ರಚನೆ ಮಾಡಲಾಯಿತು. ಸಮಿತಿ ರಚನಾ ಸಭೆಯಲ್ಲಿ ತಾಲೂಕು ಜನಹಿತ ರಕ್ಷಣಾ ವೇದಿಕೆ ಸಮಿತಿ ಸದಸ್ಯ ಕೊರಗಪ್ಪ ಗೌಡ ಅರಣ್ಯಪಾದೆ ಭಾಗವಹಿಸಿದ್ದರು.
ಸಮಿತಿಯ ಸಂಚಾಲಕರಾಗಿ ಕೃಷ್ಣರಾವ್ ಕೋಡಿತ್ತಿಲು, ದಿನೇಶ್ ಮೂಡಾಯ್ಬೆಟ್ಟು, ಸಿ. ಅದ್ದು ಚಾರ್ಮಾಡಿ, ಲತೀಪ್ ಪರ್ಲಾಣಿ, ಸುರೇಶ್ ಮಾರಂಗಾಯಿ, ಮಂಜುನಾಥ, ರೂಪ, ಕೃಷ್ಣಪ್ಪ, ಸರೋಜಿನಿ ಬರಮೇಲು, ಪುರುಷೋತ್ತಮ ಹೊಸಮಠ, ಗಣೇಶ್ ಕೋಟ್ಯಾನ್ ಗಾಂಧಿನಗರ, ಪ್ರಸಾದ್ ಅಡಿಮಾರು, ಪ್ರವೀಣ್ ಅಲ್ಲದಕಾಡು, ಸಿದ್ದಿಕ್ ಬೀಟಿಗೆ ಹಾಗೂ ಸಲಹೆಗಾರರಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದ ಅಣಿಯೂರು ಹಾಗೂ ಸರ್ವ ಸದಸ್ಯರನ್ನು ಆಯ್ಕೆ ಮಾಡಲಾಯಿತು. ದಿವಿನ್ ಚಾರ್ಮಾಡಿ ಕಾರ್ಯಕ್ರಮ ನಿರೂಪಿಸಿದರು.
p>