ನಾರಾವಿ: ನೂಜೋಡಿ ವಿದ್ಯುತ್ ತಂತಿ ಸ್ಪರ್ಶಿಸಿ ಮೋಂಟ ಮಲೆಕುಡಿಯ ಸಾವು

0

ನಾರಾವಿ: ನಾರಾವಿ ಗ್ರಾಮದ ನೂಜೋಡಿ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಅ.19ರಂದು ನಡೆದಿದೆ.

ಮೃತಪಟ್ಟ ವ್ಯಕ್ತಿ ಮೋಂಟ ಮಲೆಕುಡಿಯ (76ವ) ಎಂದು ಗುರುತಿಸಲಾಗಿದೆ. ತಮ್ಮ ಮನೆಯ ಸಮೀಪವಿರುವ ಎಲ್.ಟಿ. ವಿದ್ಯುತ್ ಲೈನ್ ನ ಮೇಲೆ ಬಿದ್ದ ತೆಂಗಿನಗರಿಯನ್ನು ದೋಂಟಿಯ ಮೂಲಕ ತೆಗೆಯಲು ಹೋದ ಸಂದರ್ಭ ಲೈನ್ ಶಾರ್ಟ್ ಆಗಿ ತಂತಿ ತುಂಡಾಗಿ ನೆಲಕ್ಕೆ ಬಿದ್ದಿದೆ. ಅದನ್ನು ಬೇರ್ಪಡಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ತಗುಲಿದೆ ಎಂದು ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ.

LEAVE A REPLY

Please enter your comment!
Please enter your name here