ಬೆಳ್ತಂಗಡಿ: ಇಂದಬೆಟ್ಟು, ಬಂಗಾಡಿ ಪರಿಸರದ ಬಿಎಸ್ಎನ್ಎಲ್ ಗ್ರಾಹಕರಿಗೆ ಒಂದು ವಾರದಿಂದ ನೆಟ್ವರ್ಕ್ ಇಲ್ಲದೆ ಹಣ ವರ್ಗಾವಣೆ ಹಾಗೂ ಬ್ಯಾಂಕ್ ವ್ಯವಹಾರಗಳು, ಇತರ ಅಗತ್ಯ ಕರೆ ಸಂಪರ್ಕಕ್ಕೂ ಬಹಳ ಸಮಸ್ಯೆಗಳಾಗುತ್ತಿದ್ದು, ಈ ಪ್ರದೇಶದಲ್ಲಿ ಬಿಎಸ್ಎನ್ಎಲ್ ಬಿಟ್ಟು ಬೇರೆ ಯಾವುದೇ ನೆಟ್ವರ್ಕ್ ಗಳು ಇರುವುದಿಲ್ಲ.
ಅತೀ ಹೆಚ್ಚು ಬಿಎಸ್ಎನ್ಎಲ್ ಗ್ರಾಹಕರನ್ನು ಹೊಂದಿರುವ ಬಂಗಾಡಿಯಲ್ಲಿ ಗ್ರಾಹಕರು ಪದೇ ಪದೇ ಕೆಟ್ಟು ಹೋಗುತ್ತಿರುವ ನೆಟ್ವರ್ಕ್ ನಿಂದ ರೀಚಾರ್ಜ್ ಮಾಡಿದರೂ ಸಮರ್ಪಕ ನೆಟ್ವರ್ಕ್ ನೀಡದೆ ಗ್ರಾಹಕರನ್ನು ಹಗಲು ದರೋಡೆ ಮಾಡುತ್ತಿರುವಂತಾಗಿದೆ ಸಂಬಂಧ ಪಟ್ಟ ಇಲಾಖೆಯವರು ಬಂಗಾಡಿ ಪರಿಸರದ ಬಿಎಸ್ಎನ್ಎಲ್ ಗ್ರಾಹಕರ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರ ಬೇಡಿಕೆಯಾಗಿದೆ.
p>