ಬೆಳ್ತಂಗಡಿ: ಜೆಸಿಐ ಮಂಜುಶ್ರೀ ವತಿಯಿಂದ ಪೂರ್ವಾಧ್ಯಕ್ಷ ಪೃಥ್ವಿರಂಜನ್ ರಾವ್ ರವರಿಗೆ ನುಡಿನಮನ

0

ಬೆಳ್ತಂಗಡಿ :ಇತ್ತೀಚೆಗೆ ನಿಧನರಾದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಪೂರ್ವಾಧ್ಯಕ್ಷ ಪೃಥ್ವಿರಂಜನ್ ರಾವ್ ರವರಿಗೆ ನುಡಿ ನಮನವನ್ನು ಜೆಸಿ ಭವನದಲ್ಲಿ ಸಲ್ಲಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಹಾಗೂ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡುವ ಮೂಲಕ ಘಟಕದ ಪರವಾಗಿ ಗೌರವವನ್ನು ಸಲ್ಲಿಸಲಾಯಿತು.

1983ರಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಂತರ ಎಲ್ಲಾ ಅಧ್ಯಕ್ಷರುಗಳಿಗೆ ಮಾರ್ಗದರ್ಶನವನ್ನು ಮಾಡುತ್ತಾ ಜೆಸಿ ಸಂಸ್ಥೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಂತರ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ.

ಇವರ ಪತ್ನಿ ಉಮಾ ರಾವ್ ಕೂಡ ಜೆಸಿರೇಟ್ ವಿಭಾಗದ ಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ ಹಾಗೂ ಪುತ್ರ ರತೀಶ್ ಹಾಗೂ ಸೊಸೆ ಪ್ರೀತಿ ರತೀಶ್ ಕೂಡ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಸಕ್ರಿಯ ಸದಸ್ಯರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ರಂಜಿತ್ ಎಚ್. ಡಿ. ವಹಿಸಿದ್ದರು. ಘಟಕದ ಪೂರ್ವಾಧ್ಯಕ್ಷ ಚಿದಾನಂದ ಇಡ್ಯಾ ಪೃಥ್ವಿರಂಜನ್ ರಾವ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಬಗ್ಗೆ ಹಾಗೂ ಅವರ ಕೊಡುಗೆಗಳನ್ನು ಸ್ಮರಿಸುತ್ತಾ ನುಡಿ ನಮನವನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜೆಸಿಐ ಮುಂಡ್ಕುರು ಭಾರ್ಗವ ಘಟಕದ ಪೂರ್ವ ಅಧ್ಯಕ್ಷರು ಹಾಗೂ ವಲಯ ಹದಿನೈದರ ಲೇಡಿ ಜೆಸಿ ವಿಭಾಗದ ಸಂಯೋಜಕಿ ಮಾಲತಿ ಉಮೇಶ್, ಜೆಸಿಐ ಮುಂಡ್ಕುರ್ ಭಾರ್ಗವ ಘಟಕದ ಅಧ್ಯಕ್ಷ ಗಣೇಶ್ ಆಚಾರ್ಯ, ಜೆಸಿಐ ಮಂಗಳೂರು ಸಾಮ್ರಾಟ್ ಘಟಕದ ಸದಸ್ಯರು, ಯುವ ಉದ್ಯಮಿ ವರುಣ್ ಪ್ರಭು, ಬೆಳ್ತಂಗಡಿ ಘಟಕದ ಪೂರ್ವ ಅಧ್ಯಕ್ಷರುಗಳಾದ ಪ್ರಶಾಂತ್ ಲಾಯಿಲ, ನಾರಾಯಣ ಶೆಟ್ಟಿ, ಲೇಡಿ ಜೆಸಿ ಸಂಯೋಜಕಿ ಶ್ರುತಿ ರಂಜಿತ್, ಉಪಾಧ್ಯಕ್ಷರುಗಳಾದ ಆಶಾ ಪ್ರಶಾಂತ್, ಚಂದ್ರಹಾಸ್, ಶೈಲೇಶ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಅಕ್ಷಯ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಅನುದೀಪ್ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here