ಧರ್ಮಸ್ಥಳ: ಇಲ್ಲಿನ ದೊಂಡೋಲೆ ನಾರ್ಯ ರಸ್ತೆಯ ಉದ್ದಕ್ಕೂ ಮೆಸ್ಕಾಂನವರು ಪೊದೆ, ಬಿದಿರು ಮುಳ್ಳು ಕಡಿದು ರಸ್ತೆಯ ಬದಿಯಲ್ಲೇ ಬಿಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ರಸ್ತೆಯಲ್ಲಿ ದ್ವಿಚಕ್ರದಲ್ಲಿ ಸಾಗುವ ಸವಾರರ ಬಟ್ಟೆಗೆ ಮುಳ್ಳು ಸಿಕ್ಕಿಹಾಕಿಕೊಂಡ ಘಟನೆಯೂ ನಡೆದಿದೆ. ಅಲ್ಲದೆ ಮಹಿಳಾ ದ್ವಿಚಕ್ರ ಸವಾರರು ಭಯದಿಂದಲೇ ಸಾಗುವ ಪರಿಸ್ಥಿತಿಯಿದೆ.
ಈ ರಸ್ತೆಯಲ್ಲಿ ಪಾದಚಾರಿಗಳು ನಡೆದಾಡಲು ಹರಸಾಹಸ ಪಡುವ ಪರಿಸ್ಥಿತಿಯಿದೆ. ಗ್ರಾಮ ಪಂಚಾಯತ್ ನವರಲ್ಲಿ ಕೇಳಿದ್ರೆ 50ಸಾವಿರ ಖರ್ಚು ಮಾಡಿದ್ದೇವೆ ಅನ್ನುತ್ತಾರೆ ಹೊರತು ಈ ಪೊದೆಗಳನ್ನು ತೆಗೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಸುದ್ದಿಗೆ ತಿಳಿಸಿದ್ದಾರೆ. ಈ ಪೊದೆಗಳನ್ನು ಗ್ರಾಮ ಪಂಚಾಯತ್ ಅಥವಾ ಮೆಸ್ಕಾಂನವರು ತೆಗೆಸಿ ಸಹಕರಿಸಬೇಕೆಂದು ಆಗ್ರಹಿಸಿದ್ದಾರೆ. ಹೀಗೆ ಬಿದಿರು ಮುಳ್ಳು, ಪೊದೆಗಳನ್ನು ಕಾಟಾಚಾರಕ್ಕೆ ಕಡಿದು ಹಾಕಿದವರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
p>