ಉಜಿರೆ: ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ  ಮೈಂಡ್‌ಪುಲ್ ಮೈಲ್ಸ್ ಮ್ಯಾರಥಾನ್

0

ಉಜಿರೆ : ವಿಶ್ವ ಮಾನಸಿಕ ಆರೋಗ್ಯ ದಿನʼದ ಪ್ರಯುಕ್ತ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ‘ಮೈಂಡ್‌ಪುಲ್ ಮೈಲ್ಸ್’ ಮ್ಯಾರಥಾನ್ ಕಾರ್ಯಕ್ರಮವನ್ನು ಅ.10ರಂದು ಹಮ್ಮಿಕೊಳ್ಳಲಾಗಿತ್ತು‌.

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಮನಶ್ಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಕ್ರೀಡಾ ವಿಭಾಗ, ಉಜಿರೆಯ ಎಸ್‌ಡಿಎಂ ಆಸ್ಪತ್ರೆ ಹಾಗೂ ರೋಟರಿ ಕ್ಲಬ್, ಬೆಳ್ತಂಗಡಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಮೈಂಡ್‌ಪುಲ್ ಮೈಲ್ಸ್’ ಮ್ಯಾರಥಾನ್‌ಗೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ. ರಮೇಶ್ ಚಾಲನೆ ನೀಡಿದರು.

ಆರೋಗ್ಯವು ಕೇವಲ ದೇಹಕ್ಕೆ ಮಾತ್ರ ಸಂಬಧಿಸಿದ್ದಲ್ಲ, ದೈಹಿಕ ಖಾಯಿಲೆ ಇಲ್ಲದೇ ಇರುವುದರ ಜೊತೆಗೆ ಮಾನಸಿಕ ಆರೋಗ್ಯ ಕೂಡ ಅತಿ ಮುಖ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿದ್ದು, ಇದು ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ತಿಳಿಸಿದರು.

ರತ್ನವರ್ಮ ಕ್ರೀಡಾಂಗಣದಿಂದ ಒಂದು, ಮೂರು ಹಾಗೂ ಐದು ಕಿ.ಮೀ. ಮ್ಯಾರಥಾನ್‌ ಆಯೋಜನೆ ಮಾಡಲಾಗಿತ್ತು. ಮ್ಯಾರಥಾನ್‌ ವೇಳೆ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಲಾಯಿತು. 160 ಜನರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಶಿಕ್ಷಣಸಂಸ್ಥೆಯ ಐಟಿ ಮತ್ತು ಹಾಸ್ಟೆಲ್‌ ಆಡಳಿತ ವಿಭಾಗದ ಸಿಇಒ ಪೂರನ್‌ ವರ್ಮ, ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್‌, ದೈಹಿಕಶಿಕ್ಷಣ ವಿಭಾಗದ ಮುಖ್ಯಸ್ಥ ರಮೇಶ್‌ ಹೆಚ್‌., ಹಾಗೂ ಕಾರ್ಯಕ್ರಮ ಸಂಯೋಜಕಿ ಅಶ್ವಿನಿ ಹೆಚ್. ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here