ಕೊಯ್ಯೂರು: ಮಲೆಬೆಟ್ಟು ವನದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಮತ್ತು ಭಜನೋತ್ಸವ ಕಾರ್ಯಕ್ರಮ

0

ಕೊಯ್ಯೂರು: ಮಲೆಬೆಟ್ಟು ವನದುರ್ಗಾ ದೇವಸ್ಥಾನದಲ್ಲಿ ಪ್ರತೀ ರಾತ್ರಿ ಅ.3ರಂದು ಶ್ರೀ ರಾಮ ಭಜನಾ ಮಂಡಳಿ ಮಲೆಬೆಟ್ಟು, ಅ.4ರಂದು ಶಿವಪಾರ್ವತಿ ಮಹಿಳಾ ಭಜನಾ ಮಂಡಳಿ ಓಡಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.ಅ.5ರಂದು ಗಮಕ ಕಲಾ ಪರಿಷತ್ ಬೆಳ್ತಂಗಡಿ ಇದರ ಸದಸ್ಯರಿಂದ ಗಮಕ ನೃತ್ಯ ರೂಪಕ-ಶ್ರೀ ಕೃಷ್ಣ ಲೀಲಾಮೃತ ನಡೆಯಿತು.

ಅ.6ರಮದು ನವರಾತ್ರಿ ಪೂಜೆ ಮತ್ತು ರಂಗಪೂಜೆ ನಡೆಯಿತು.ಅ.7ರಂದು ಗಣಪತಿ ಭಟ್ ಕುಳವರ್ಮ ಇವರಿಂದ ಕಾವ್ಯ ರಸಾಸ್ಪಾನೆ ನಡೆಯಿತು.ನಂತರ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ, ದೇವಸ್ಥಾನದ ಸಿಬ್ಬಂದಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here