ಉಜಿರೆ: ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿಗೆ ಲಾರಿ ಕುಸಿದು ಬಿದ್ದ ಘಟನೆ ಅ.8ರಂದು ಉಜಿರೆಯಲ್ಲಿ ಮುಂಜಾನೆ ನಡೆದಿದೆ.
ಮಂಗಳೂರಿನಿಂದ ಉಜಿರೆ ಕಡೆಗೆ ಬರುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಎಂ ಜಿ ಟ್ರೇಡರ್ಸ್ ಉಜಿರೆಯ ಅಂಗಡಿಗೆ ತಿರುಗಿಸುವ ವೇಳೆಯಲ್ಲಿ ಮೋರಿಯಲ್ಲಿ ಸಿಲುಕಿಕೊಂಡು ಲಾರಿ ಮಾಲಕನಿಗೆ ಅಪಾರ ನಷ್ಟ ಉಂಟಾಗಿದೆ.
ಲಾರಿ ಚಾಲಕ ಮತ್ತು ಅಂಗಡಿ ಮಾಲಕರು ಹೆದ್ದಾರಿ ಇಲಾಖೆಯ ಕಳಪೆ ಕಾಮಗಾರಿಯಿಂದ ಇಂತಹ ಘಟನೆಗಳು ಪದೇಪದೇ ನಡೆಯುತ್ತಿದೆ ಇದರಿಂದ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಸಂಬಂಧಪಟ್ಟವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
p>