ಮಲವಂತಿಗೆ: ಅಕ್ರಮ ಗೋ ಸಾಗಾಟ- 2 ವಾಹನಗಳು ಸಮೇತ 5 ಗೋವುಗಳನ್ನು ವಶಕ್ಕೆ ಪಡೆದ ಪೊಲೀಸರು

0

ಮಲವಂತಿಗೆ ಗ್ರಾಮದ ಕಜಕ್ಕೆ ಎಂಬಲ್ಲಿ ಅಕ್ರಮವಾಗಿ ಕಳಸದಿಂದ ಬರುತ್ತಿದ್ದ 2 ಪಿಕಪ್ ವಾಹನಗಳನ್ನು ಅ.03ರಂದು ರಾತ್ರಿ ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಅಕ್ರಮವಾಗಿ ಗುತ್ಯಾಡ್ಕದಿಂದ ದಿಡುಪೆ ರಸ್ತೆ ಮೂಲಕ ವಾಹನ ಒಂದರಲ್ಲಿ 2 ಗೋವು, ಮತ್ತೊಂದು ವಾಹನದಲ್ಲಿ 3 ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ಸ್ಥಳೀಯರು ಮತ್ತು ಪೋಲಿಸರ ಸಮ್ಮುಖದಲ್ಲಿ ತಡೆ ಹಿಡಿಯಲಾಯಿತು.

ಅಕ್ರಮ ಗೋ ಸಾಗಾಟದ ವಾಹನಗಳನ್ನು ಬೆಳ್ತಂಗಡಿ ಪೋಲಿಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here