ಬೆಳ್ತಂಗಡಿ: ಲಯನ್ಸ್ ಕ್ಲಬ್ ಇಲ್ಲಿಗೆ ಪ್ರಾಂತ್ಯ ಮತ್ತು ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಕಾಪಿನಡ್ಕ ಸ.ಕಿ.ಪ್ರಾ. ಶಾಲೆಗೆ ಕಂಪ್ಯೂಟರ್ ಉಪಕರಣಗಳ ಹಸ್ತಾಂತರ

0

ಬೆಳ್ತಂಗಡಿ: ಲಯನ್ಸ್ ಕ್ಲಬ್ ಇಲ್ಲಿಗೆ ಪ್ರಾಂತ್ಯ ಮತ್ತು ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದ ಸಂದರ್ಭದಲ್ಲಿ ಸೇವೆಯನ್ನು ಅಪ್ಪಿಕೊಳ್ಳಿ ಎಂಬ ಧ್ಯೇಯದೊಂದಿಗೆ ಕಾಪಿನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ಕಂಪ್ಯೂಟರ್ ಉಪಕರಣಗಳನ್ನು ಹಸ್ತಾಂತರಿಸಲಾಯಿತು.ಮುಖ್ಯ ಶಿಕ್ಷಕಿ ಅನಿತಾ ಇವರು ಪಡೆದುಕೊಂಡರು.

ಈ ಸಂದರ್ಭದಲ್ಲಿ ಪ್ರಾಂತ್ಯಧ್ಯಕ್ಷ ಲಯನ್ ವೆಂಕಟೇಶ್ ಹೆಬ್ಬಾರ್, ಲಯನ್ ಪ್ರತಿಭಾ ಹೆಬ್ಬಾರ್, ವಲಯಾಧ್ಯಕ್ಷ ಲಯನ್ ಉಮೇಶ್ ಶೆಟ್ಟಿ ಉಜಿರೆ, ಲಯನ್ ರೋಷನ್ ಮುಚ್ಚೂರ್, ಬೆಳ್ತಂಗಡಿ ಅಧ್ಯಕ್ಷ ಲಯನ್ ದೇವದಾಸ್ ಶೆಟ್ಟಿ ಹಿಬರೋಡಿ, ಕಾರ್ಯದರ್ಶಿ ಲಯನ್ ಕಕಿರಣ್ ಕುಮಾರ್ ಶೆಟ್ಟಿ, ವಿವಿಧ ಕ್ಲಬ್ ನ ಅಧ್ಯಕ್ಷರುಗಳು ಹಾಜರಿದ್ದರು.

ಲಯನ್ ಆಮಿತಾನಂದ ಹೆಗ್ಡೆ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here