


ಬೆಳ್ತಂಗಡಿ: ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ., ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ವತಿಯಿಂದ ಅ.1ರಂದು ಗಾಂಧಿ ಜಯಂತಿ ಹಾಗೂ ತಾಲೂಕಿನ ಪ್ರಥಮ ಛಾಯಾಗ್ರಾಹಕ ಶಶಿಧರ್ ರಾವ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಗೌರವಾಧ್ಯಕ್ಷ ಜಗದೀಶ್ ಜೈನ್ ದರ್ಮಸ್ಥಳ ಗಾಂಧಿಯವರ ಜೀವನ ಶೈಲಿ ಹಾಗೂ ಹೋರಾಟದ ಬಗ್ಗೆ ವಿವರಿಸಿದರು.

ವಲಯದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ ಶಶಿಧರ್ ರಾವ್ ಅವರ ವೃತ್ತಿ ಜೀವನ ಬಗ್ಗೆ ವಿವರಿಸಿ ರೋಟರಿ ಕಬ್ಲ್ ಅಧ್ಯಕ್ಷರಾಗಿ ಪ್ರತಿಕೆಯಲ್ಲಿ ಪ್ರಟಕವಾದ ವರದಿಯನ್ನು ನೆನಪಿಸಿಕೊಂಡರು. 45 ವರ್ಷಗಳ ಹಿಂದೆ ಅವರ ಛಾಯಾಚಿತ್ರದ ಗುಣಮಟ್ಟದ ತಿಳಿಸಿದರು. ಶಿಷ್ಯ ದಾಮೋದರ್ ಗುರುವಾಯಿನಕೆರೆ ಅವರ ಜೊತೆ ಕೆಲಸ ಮಾಡಿದ ಅನುಭವವನ್ನು ಹಾಗೂ ವಸಂತ್ ಶರ್ಮ ಶಶಿಧರ್ ರಾವ್ ಅವರ ವೃತ್ತಿ ಬಗ್ಗೆ ಹಂಚಿಕೊಂಡರು.
ಸಂದರ್ಭದಲ್ಲಿ ವಲಯದ ಅಧ್ಯಕ್ಷೆ ಸಿಲ್ವಿಯಾ ಬೆಳ್ತಂಗಡಿ, ಉಪಾಧ್ಯಕ್ಷ ರತ್ನಾಕರ್ ಪುಂಜಾಲಕಟ್ಟೆ, ಗಣೇಶ್ ನರ್ಮದಾ, ಪ್ರಧಾನ ಕಾರ್ಯದರ್ಶಿ ವಿಜಯ ಎಚ್ ಭಟ್., ಕೋಶಾಧಿಕಾರಿ ಹರೀಶ್ ಕೊಲ್ತಿಗೆ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಬಾರದ್ವಜ್ ಉಜಿರೆ, ಎಸ್ ಕೆ ಪಿ ವಿವಿದ್ದೋದೇಶ ಸಹಕಾರಿ ಸಂಘದ ನಿರ್ದೇಶಕ ವಿಲ್ಸನ್ ಬೆಳ್ತಂಗಡಿ ಹಾಗೂ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.