ಮಡಂತ್ಯಾರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖ ಹಾಗೂ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ ಮತ್ತು ರಕ್ತೇಶ್ವರಿಪದವು ಅಂಗನವಾಡಿ ಕೇಂದ್ರದ ಜಂಟಿ ಆಶ್ರಯದಲ್ಲಿ ಪೌಷ್ಟಿಕ ಆಹಾರ ಪೋಷಣ್ ಅಭಿಯಾನ ಸೆ.30ರಂದು ನಡೆಯಿತು.
ಕಣಿಯೂರು ಸರಕಾರಿ ಆಯುಷ್ ಇಲಾಖೆ, ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ಸಹನಾ ದೀಪ ಬೆಳಗಿಸಿ ಚಾಲನೆ ನೀಡಿದರು.ಮಹಿಳೆಯರು ಆರೋಗ್ಯವಂತ ಜೀವನವನ್ನು ನಡೆಸಲು ಪೌಷ್ಟಿಕ ಆಹಾರ ಸೇವನೆಯಿಂದ ಗರ್ಭ ಧರಿಸಿದ ನಂತರ ಹುಟ್ಟಿದ ಮಗು ಸಮಾಜ ಉತ್ತಮ ಆರೋಗ್ಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಬೆಳ್ತಂಗಡಿ ಆರೋಗ್ಯ ಇಲಾಖೆ ಕ್ಷೇತ್ರ ಆರೋಗ್ಯ ಅಧಿಕಾರಿ ಅಮ್ಮಿ ಸಿಸ್ಟರ್ ಹೇಳಿದರು.
ಬೆಳ್ತಂಗಡಿ ಸಮುದಾಯ ಆರೋಗ್ಯ ಅಧಿಕಾರಿ ಡಾ.ರೇಷ್ಮಾ, ನಿವೃತ್ತ ಸೈನಿಕ ವಿಕ್ರಂ ಜೆ.ನಿವೃತ್ತ ಸೈನಿಕ ದಿನೇಶ್ ಕುಮಾರ್, ನ್ಯಾಯತರ್ಪು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಸಂತ ಕುಮಾರ್, ರಕ್ತೇಶ್ವರಿ ಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ವಸಂತ ಗೌಡ ಕೆ, ನೇತಾಜಿ ಕ್ರೀಡಾ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ, ಬಾಲ ವಿಕಾಸ ಸಮಿ ಅಧ್ಯಕ್ಷ ಜಯಶ್ರೀ ರಮೇಶ್, ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಕವಿತಾಶ್ರೀ, ಆಶಾ ಕಾರ್ಯಕರ್ತೆಯ ಗುಣವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ.ಸದಸ್ಯರಾದ ಸುಭಾಷಿಣಿ ಕೆ, ವಿಜಯ ಕುಮಾರ್ ಕೆ, ಮಾಜಿ ಅಧ್ಯಕ್ಷ ತುಕಾರಾಂ ಪೂಜಾರಿ, ಸ್ಥಳೀಯ ಹಿರಿಯರಾದ ಧರ್ಣಪ್ಪ ಗೌಡ, ಜನಾರ್ದನ ಪೂಜಾರಿ, ಆಶಾ ಕಾರ್ಯಕರ್ತೆಯರಾದ ಶಶಿಕಲಾ.ಕೆ, ಪೂರ್ಣಿಮಾ ಕೆ, ಅಂಗನವಾಡಿ ಕಾರ್ಯಕರ್ತರಾದ ನವೀನ ಕುಮಾರಿ, ಶಶಿಕಲಾ, ಬಾಲವಿಕಾಸ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು, ಮಕ್ಕಳ ಪೋಷರು ಭಾಗವಹಿಸಿದರು.
ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಕೆ.ಎಸ್. ಸ್ವಾಗತಿಸಿ, ವಂದಿಸಿದರು.ಉಮೇಶ್ ಕೇಲ್ದಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸನ್ಮಾನ: ನಿವೃತ್ತ ಸೈನಿಕ ವಿಕ್ರಂ ಜೆ, ಬಾಲ ವಿಕಾಸ ಸಮಿತಿ ಮಾಜಿ ಅಧ್ಯಕ್ಷರಾದ ಪಾವನಗಂಗ ಭಟ್, ಸುರೇಖ ಅವರನ್ನು ಸನ್ಮಾನಿಸಿ ಗೌರವಿಸಿದರು.