



ಅಳದಂಗಡಿ: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ.12ರಂದು ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ನಿರಂಜನ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ದ.ಕ.ಸ.ಹಾ. ಒಕ್ಕೂಟದ ಸಹಾಯಕ ವ್ಯವಸ್ಥಾಪಕಿ ಡಾ|ಪೂಜಾ ಅವರು ಕಡಿಮೆ ವೆಚ್ಚದಲ್ಲಿ ಪಶು ಸಾಕಣೆಯ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಕೃಷಿ ಪರಸ್ಪರ ಪೂರಕ ಅಂಶಗಳು. ಈ ಎರಡೂ ಕ್ಷೇತ್ರಗಳಿಂದ ಯಾರೂ ನಷ್ಟಹೊಂದಿಲ್ಲ. ನಾವು ಜಾನುವಾರುಗಳನ್ನು ಪ್ರೀತಿಯಿಂದ ಸಾಕಿ ಸಲಹಿದರೆ ಅದು ನಮ್ಮ ಆರ್ಥಿಕ ಉನ್ನತಿಗೆ ಖಂಡತಾ ಸಹಾಯವಾಗುತ್ತದೆ ಎಂದರು.


ಅಧ್ಯಕ್ಷ ನಿರಂಜನ ಜೋಶಿ ಅವರು, ವರದಿ ಸಾಲಿನಲ್ಲಿ ನಮ್ಮ ಸಂಘಕ್ಕೆ ಒಟ್ಟು 72,79,567 ಬೆಲೆಯ ಹಾಲನ್ನು ಖರೀದಿಸಲಾಗಿದೆ. ಸ್ಥಳೀಯ ಹಾಲು ಮಾರಾಟದಿಂದ 1,22,746 ರೂ. ಬಂದಿದೆ. 7,63,0655 ಬೆಲೆಯ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ರೂ. 7,08,3901ನ್ನು ಉತ್ಪಾದಕರಿಗೆ ಪಾವತಿ ಮಾಡಲಾಗಿದೆ. ಪಶು ಆಹಾರ ಮಾರಾಟದಿಂದ 27,867 ಲಾಭ ಬಂದಿದೆ ಎಂದ ಅವರು ಸಂಘವನ್ನು ಲಾಭದಲ್ಲಿ ಮುನ್ನಡೆಸುವ ಪ್ರಯತ್ನ ನಮ್ಮೆಲ್ಲದ್ದರಾಗಬೇಕು ಎಂದರು.
ನಿರ್ದೇಶಕರಾದ ಮೋಹನ ಹೆಗ್ಡೆ, ಹರೀಶ್ ಪೂಜಾರಿ, ಹರೀಶ್ ಮಡಿವಾಳ, ಪ್ರವೀಣ ಚಂದ್ರ ಮೆಹೆಂದಲೇ, ಪ್ರಮೋದ, ಜಗನ್ನಾಥ, ಆನಂದ ಪ್ರಕಾಶ ಕುಟಿನ್ಹ, ರೀಟಾ ಡಿ’ಸೋಜ, ಸುಶೀಲ, ಯಶೋದ, ಹಾಲು ಪರೀಕ್ಷಕಿ ಸುಜಾತಾ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಶ್ರೀದೇವಿ ವರದಿ ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಪ್ರವೀಣಚಂದ್ರ ಮೆಹೆಂದಳೆ ಸ್ವಾಗತಿಸಿದರು. ಉಪಾಧ್ಯಕ್ಷೆ ವನಿತಾ ವಂದಿಸಿದರು. ಕಾರ್ಯಕ್ರಮ ನಿರ್ವಹಿಸಿದರು.


            






