


ಬಂದಾರು: ಇಲ್ಲಿನ ಬಟ್ಲಡ್ಕ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್ ದಲಜೆ ಹಾಗೂ ಇವರ ಮಗ ಫಾರೂಕ್ ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸುವರೇ ಮುಂದಿನ ವಾರ ಹೋಗುವ ಕಾರಣ ಬಟ್ಲಡ್ಕ ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕ್ರಮ ಪ್ರಧಾನ ಕಾರ್ಯದರ್ಶಿ ನಿರೂಪಿಸಿ, ಅಭಿನಂದಿಸಿದರು.
ಅಧ್ಯಕ್ಷ ಮುಹಮ್ಮದ್ ಬಂದಾರು, ಕೋಶಾಧಿಕಾರಿ ಈಸುಬು ಪೇರಲ್ತಪಲಿಕೆ, ಜೊತೆ ಕಾರ್ಯದರ್ಶಿ ಸಿದ್ದೀಕ್ ಪೇರಲ್ತಪಲಿಕೆ, ಸದಸ್ಯರಾದ ಅಬೂಬಕ್ಕರ್, ಸುಲೈಮಾನ್, ಹಮೀದ್ ನರಮಾಜೆ ಮುಂಡಲಕೋಡಿ, ರಫೀಕ್ ಯೆಸ್ ವೈ ಯೆಸ್ ಅದ್ಯಕ್ಷರು, ಇಸ್ಮಾಯಿಲ್ ಬಟ್ಲಡ್ಕ, ಸ್ಥಳೀಯ ಖತೀಬ್ ಉಸ್ತಾದ್ ಮುಹಮ್ಮದ್ ಆಸಿಫ್ ಸಖಾಫಿ ಉಪಸ್ಥಿತರಿದ್ದರು.









