ಬೆಳ್ತಂಗಡಿ: ಮಹಿಳೆಯರಿಗೆ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ- ಮಹಿಳೆಯರು ಯಾವುದಕ್ಕೂ ಅಂಜದೇ ಮುಂದೆ ಬಂದು ಆರ್ಥಿಕವಾಗಿ ಸಬಲರಾಗಬೇಕು: ಭವಾನಿಶಂಕರ್ ಎನ್

0

ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತಿಯ ಸಭಾಭವನದಲ್ಲಿ ತಾಲೂಕು ಪಂಚಾಯತ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗೆ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ ನಡೆಯಿತು. ಈ ಕಾರ್ಯಕ್ರಮಕ್ಕೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ರವರು ಭೇಟಿ ನೀಡಿ, ಮಹಿಳೆಯರ ಸಬಲೀಕರಣ ಕುರಿತಂತೆ ಬಂದ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು.ಅನುದಾನಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆರ್ಥಿಕ ವರ್ಷ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲಿದ್ದು, 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಾಮಗಾರಿ ಮಾಡುವವರು ಅರ್ಜಿ ನೀಡಬಹುದು. ಮಹಿಳೆಯ ಸಬಲಿಕರಣವಾಗುವ ನಿಟ್ಟಿನಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಕಾಮಗಾರಿ ಬೇಡಿಕೆ ಬರುವಂತೆ ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲ ಕಡೆ ಪ್ರಚಾರ ಮಾಡಬೇಕು ಎಂದರು.

ಉಜಿರೆ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿರವರು ಮಾತನಾಡಿ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಮಹಿಳೆಯರಿಗೆ ತಮ್ಮ ಜೀವನೋಪಾಯಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಮಾಡಿಕೊಂಡು ಸ್ವಾವಲಂಬನ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಯ್ಯೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಎಸ್, ಬೆಳಾಲು ಗ್ರಾಮ ಪಂಚಾಯತ್ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್, ಇಂದಬೆಟ್ಟು ಗ್ರಾ.ಪಂ ಕಾರ್ಯದರ್ಶಿ ಗಿರಿಯಪ್ಪ ಗೌಡ, ನಡ ಗ್ರಾ.ಪಂ ಕಾರ್ಯದರ್ಶಿ ಕಿರಣ್, ತಾಲೂಕು ತಾಂತ್ರಿಕ ಸಂಯೋಜಕರು(ಅ.ಇ)ಪೂರ್ಣಿಮಾ ಎಂ.ಸಿ, ತಾಂತ್ರಿಕ ಸಹಾಯಕ ಅಭಿಯಂತರ ಶರಣ್ ರೈ, ಗೌತಮ್, ರೇಷ್ಮಾ ರಾಜ್, ಕು.ಪ್ರಾರ್ಥನ ತಾಂತ್ರಿಕ ಸಹಾಯಕರು, (ಕೃ/ತೋ/ಅ)ತಾಲೂಕು ಐಇಸಿ ಸಂಯೋಜಕಿ ವಿನಿಷ, ಬಿ.ಎಫ್. ಟಿಗಳಾದ ಶ್ರಿಮತಿ ಹೆಲನ್, ಶ್ರೀಮತಿ ವಸಂತಿ, ಪ್ರವೀಣ್, ಉಜಿರೆ ನಡ, ನಾವೂರು, ಇಂದಬೆಟ್ಟು, ಬಂದಾರು,ಮಿತ್ತಬಾಗಿಲು, ಲಾಯಿಲ, ಕೊಯ್ಯೂರು, ಬೆಳಾಲು ಗ್ರಾಮ ಪಂಚಾಯತಿಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು,ಎಮ್.ಬಿ. ಕೆ, ಎಲ್. ಸಿ. ಆರ್. ಪಿ, ಕೃಷಿ ಸಖಿ, ಪಶು ಸಖಿ, ನರೇಗಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಯಾನಂದ ವಲಯ ಮೇಲ್ವಿಚಾರಕರು ಎನ್. ಆರ್. ಎಲ್. ಎಮ್ ತಾಲೂಕು ನಿರ್ವಹಣಾ ಘಟಕ ಇವರು ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here