


ಉಜಿರೆ: “ಭಾಷೆ ಎನ್ನುವಂತದ್ದು ಎಲ್ಲಾ ಚೌಕಟ್ಟನ್ನು ಮೀರಿ ಬೆಳೆದಿರುವ ಒಂದು ವಿಷಯ. ಮೊದಲು ನಮ್ಮ ಮಾತೃ ಭಾಷೆಯ ಬಗ್ಗೆ ನಮಗೆ ಪ್ರೀತಿ, ಅಭಿಮಾನ ಇರಬೇಕು” ಎಂದು ಉಜಿರೆಯ ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರದ ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿಘ್ನೇಶ್ ಐತಲ್ ಹೇಳಿದರು.


ಎಸ್.ಡಿ.ಎಂ. ವಸತಿಯುತ ಪದವಿಪೂರ್ವ ಕಾಲೇಜಿನಲ್ಲಿ ಸೆ.26ರಂದು ಆಂಗ್ಲ ಭಾಷಾ ವಿಭಾಗವು ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಷೆ ಬಳಕೆ ವೇಳೆ ಪದಗಳ ಉಚ್ಚಾರದಲ್ಲಿ ತಪ್ಪುಗಳಾಗದಂತೆ ಗಮನ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅಧ್ಯಕ್ಷತೆ ವಹಿಸಿದ್ದರು.ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









