ಸುದ್ದಿಯ ಸುತ್ತ ವಾರಕ್ಕೊಂದು ಸುತ್ತು ವಿಶೇಷ ಕಾರ್ಯಕ್ರಮದ ೨ನೇ ನೇರಪ್ರಸಾರ ಸೆ.೧೩ರಂದು ಸಂಜೆ ಸುದ್ದಿ ನ್ಯೂಸ್ ಬೆಳ್ತಂಗಡಿ ಸ್ಟುಡಿಯೋದಲ್ಲಿ ನಡೆಯಿತು.
ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಅವರು ಪ್ರಮುಖ ಘಟನೆಗಳ ಕುರಿತು ವಿಶ್ಲೇಷಣೆ ನಡೆಸಿದರು. ಪ್ರಮುಖವಾಗಿ ಪರಿಶಿಷ್ಟ ಜಾತಿ, ಪಂಗಡದ ಹಿತರಕ್ಷಣಾ ಸಭೆ-ಗುತ್ತಿಗೆಯಲ್ಲಿ ಶೇ.೨೫ ಮೀಸಲು ಪಾಲಿಸಲು ಆಗ್ರಹ, ಬೆಳ್ತಂಗಡಿಯ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಅರಣ್ಯ ಇಲಾಖೆ ನೊಟೀಸ್, ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ರಾಜೀನಾಮೆ, ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ, ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗದ ದರ್ಬಾರ್, ಚಿಬಿದ್ರೆಯಲ್ಲಿ ಕಾಡಾನೆ ದಾಳಿ-ಬೆಳೆ ಹಾನಿ, ಪುದುವೆಟ್ಟು ನಡ್ಯೇಲ್‌ನಲ್ಲಿ ಮುಂದುವರಿದ ಕಾಡಾನೆ ದಾಳಿ, ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಸಂಗೀತ ನಿರ್ದೇಶಕ ಪ್ರಸಾದ್ ಕೆ. ಶೆಟ್ಟಿ ಬಾರ್ಯ, ಸ್ಪೇನ್‌ಗಾಟ್ ಟಾಲೆಂಟ್‌ಗೆ ಉಜಿರೆಯ ವಿಲಾಸ್ ನಾಯಕ್, ಮಕ್ಕಳಿಲ್ಲದ ನೋವು ಮರೆಯಲು ಬೆಕ್ಕು ಸಾಕುವ ದಂಪತಿ ಇತ್ಯಾದಿ ವಿಚಾರಗಳ ಕುರಿತು ವಿಶ್ಲೇಷಣೆ ನಡೆಸಲಾಯಿತು. ಅಲ್ಲದೆ ೧೦ ಮೈಲು ರಸ್ತೆ ಮಾಡುವವರಿಗೆ ಹಣ ನೀಡದೆ ಅಷ್ಟೇ ಹಣವನ್ನು ಒಂದು ಮೈಲು ರಸ್ತೆ ಮಾಡುವವರಿಗೆ ನೀಡಿದರೆ ಅದು ಭ್ರಷ್ಟಾಚಾರವಾಗುವುದಿಲ್ಲವೇ-ಅದೇ ರೀತಿ ೧೦ ಪಟ್ಟು ಹೆಚ್ಚು ಪ್ರಸಾರವಿರುವ, ಜನರಿಗೆ ತಲುಪುವ ಪತ್ರಿಕೆಗೆ ಜಾಹೀರಾತು ನೀಡದೆ ಕಡಿಮೆ ಪ್ರಸಾರದ ಪತ್ರಿಕೆಗೆ ಕೊಟ್ಟರೆ ಏನೆಂದು ಕರೆಯಬೇಕು ಎಂದು ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಅವರು ಬರೆದಿರುವ ಲೇಖನದ ಕುರಿತು ಚರ್ಚೆ ನಡೆಸಲಾಯಿತು.
ಸುದ್ದಿಯ ಸುತ್ತು ವಾರಕ್ಕೊಂದು ಸುತ್ತು ಕಾರ್ಯಕ್ರಮದ ೩ನೇ ನೇರಪ್ರಸಾರ ಸೆ.೨೦ರಂದು ಸಂಜೆ ನಡೆಯಲಿದ್ದು ಪ್ರಮುಖವಾಗಿ *ಸಂಸದ ಬ್ರಿಜೇಶ್ ಚೌಟರಿಂದ ರೆಖ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲನೆ-ರಾಷ್ಟ್ರೀಯ ಹೆದ್ದಾರಿ, ಸರ್ವೀಸ್ ರಸ್ತೆ ತ್ವರಿತ ಕಾಮಗಾರಿಗೆ ಸೂಚನೆ * ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ ಅದು ರೌಡಿಗಳ, ರಾಸ್ಕಲ್‌ಗಳ, ಅಕ್ರಮ ವ್ಯವಹಾರ ಮಾಡುವವರ, ಜಗಳ ಗಂಟರ ಕೈಗೆ ಹೋಗುತ್ತದೆ -ಚರ್ಚಿಲ್, ಭಾರತದ ಕಟ್ಟ ಕಡೆಯ ವ್ಯಕ್ತಿಗೆ ಸಮಾನ ಅವಕಾಶ, ಹಕ್ಕು, ಸಾಮರಸ್ಯದ, ಸ್ವಾವಲಂಬಿ ಜೀವನ ದೊರಕಿ ತಲೆಯೆತ್ತಿ ನಿಲ್ಲುವಂತಾಗುವುದೇ ಸ್ವಾತಂತ್ರ್ಯದ ಉzಶ- ಮಹಾತ್ಮಗಾಂಧಿ,ಪ್ರಜಾಪ್ರಭುತ್ವ ಅಂದರೆ ಪ್ರಜೆಗಳು… ಪ್ರಭುಗಳು,ಅವರz ಆಡಳಿತ ಎಂದರ್ಥ,ಜನಪ್ರತಿನಿಧಿಗಳು, ಅಧಿಕಾರಿಗಳು… ಜನಸೇವಕರು -ಅದು ಇಲ್ಲಿ ನಡೆಯುತ್ತಿದೆಯೇ? ಡಾ. ಯು.ಪಿ. ಶಿವಾನಂದರ ಲೇಖನ * ಟಾಯ್ಲೆಟ್‌ನಲ್ಲಿ ವಾಸಿಸುತ್ತಿದ್ದ ಚೆಲುವಮ್ಮ ಮನೆಗೆ ಶಿಫ್ಟ್ * ಸೆ.೨೨ರಿಂದ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ* ದಿನೇಶ್ ಅಮ್ಮಣ್ಣಾಯರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ * ತೆರಿಗೆ ಪಡೆದು ರಶೀದಿ ಕೊಟ್ಟ ಮೇಲೆ ಅಕ್ರಮ ಹೇಗೆ? ಕುವೆಟ್ಟು ಗ್ರಾಮಸಭೆಯಲ್ಲಿ ಚರ್ಚೆ * ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ * ಸ್ಪರ್ಧಿ ತ್ರಿಷಾರಿಗೆ ಜೆಸಿಐಯಿಂದ ಗೌರವ * ಸಿ.ಎಂ. ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್ ಫೇಸ್‌ಬುಕ್‌ನಲ್ಲಿ ಪೂಂಜ ಪೋಸ್ಟ್ ಹಾಕಿದ್ದ ಪ್ರಕರಣ-ಶಾಸಕ ಪೂಂಜ ಮತ್ತು ಫೇಸ್‌ಬುಕ್ ಕಂಪನಿಗೆ ನೊಟೀಸ್ ಜಾರಿಗೊಳಿಸಿದ ತನಿಖಾಧಿಕಾರಿ * ರಾಷ್ಟ್ರೀಯ ಲೋಕ ಅದಾಲತ್: ೧೦೩೯ ಪ್ರಕರಣಗಳು ಇತ್ಯರ್ಥ * ತಾ.ಪಂ. ಮತ್ತು ಗ್ರಾಮ ಪಂಚಾಯತಿಗಳಿಗೆ ನಿಯಮ ಬಾಹಿರವಾಗಿ ಕಾನೂನು ಸಲಹೆಗಾರರಾಗಿ ಶೈಲೇಶ್ ಟೋಸರ್ ನೇಮಕ: ಜಿ.ಪಂ. ಸಿಇಓಗೆ ವಕೀಲ ಸುರೇಶ್ ದೂರು, ತಾ.ಪಂ ಸಾಮಾನ್ಯ ಸಭೆಯ ನಿರ್ಣಯದಂತೆ ನನ್ನ ನೇಮಕವಾಗಿದೆ-ಶೈಲೇಶ್ ಟೋಸರ್ ಸ್ಪಷ್ಟನೆ * ನರಕಧಾಮವಾಗಿದೆ ಗುರುವಾಯನಕೆರೆ ಮೋPಧಾಮ-ರಾಶಿರಾಶಿ ಕಸದಿಂದ ಗಬ್ಬು ನಾರುತ್ತಿದೆ ಗುರುವಾಯನಕೆರೆ ಹಿಂದೂ ರುದ್ರಭೂಮಿ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಸಾರ್ವಜನಿಕರು ೮೦೫೦೨೯೪೦೫೨ ನಂಬರ್‌ಗೆ ಕರೆ ಮಾಡಿ ಮಾತನಾಡಬಹುದು.
ಸುದ್ದಿಯ ಸುತ್ತ ವಾರಕ್ಕೊಂದು ಸುತ್ತು ಕಾರ್ಯಕ್ರಮ ನೇರಪ್ರಸಾರ-2
p>