ನ.9:ಉಜಿರೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ದೇಸಿ ನಾಯಿ, ಬೆಕ್ಕು ಉಚಿತ ದತ್ತು ಕೊಡುವ ಶಿಬಿರ

0

ಉಜಿರೆ: ಮಂಗಳೂರಿನ ಶಕ್ತಿನಗರದಲ್ಲಿರುವ ಎನಿಮಲ್ ಕೇರ್ ಟ್ರಸ್ಟ ಮತ್ತು  ಬೆಳ್ತಂಗಡಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ನ. 9ರಂದು ಉಜಿರೆ ಬಸ್ ಸ್ಟ್ಯಾಂಡ್ ಬಳಿ (ಸಂಧ್ಯಾ ಟ್ರೇಡರ್ಸ ಎದುರು), ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ ಏರ್ಪಡಿಸಲಾಗಿದೆ. ಎಲ್ಲಾ ಮರಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದುಗಳನ್ನೂ ನೀಡಲಾಗಿರುತ್ತದೆ.

ಎನಿಮಲ್ ಕೇರ್ ಟ್ರಸ್ಟನವರು ಆದಷ್ಟು ಸಂತಾನವಾಗದಂತೆ ಚಿಕಿತ್ಸೆ ಮಾಡಿದ ಬೆಕ್ಕು/ನಾಯಿ ಮರಿಗಳನ್ನು ತರುವ ಭರವಸೆ ನೀಡಿದ್ದಾರೆ. ಒಂದು ವೇಳೆ ಶಿಬಿರಕ್ಕೆ ತಂದಿರುವ ಬೆಕ್ಕು/ ನಾಯಿ ಮರಿಗಳಿಗೆ ಸಂತಾನ ವಾಗದಂತೆ ಚಿಕಿತ್ಸೆ ಆಗಿರದಿದ್ದರೆ, ಆ ಮೇಲೆ, ಅವರ ಕೇಂದ್ರಕ್ಕೆ ಅವುಗಳನ್ನು ತಂದಲ್ಲಿ, ಉಚಿತವಾಗಿ ಮಾಡಿ ಕೊಡಲಾಗುವುದು. ಆರ್ಥಿಕವಾಗಿ ದುರ್ಬಲರು ಇದರ ಪ್ರಯೋಜನ ಪಡೆಯಬಹುದು.

ಶಿಬಿರದಲ್ಲಿ ಬೆಕ್ಕು/ನಾಯಿ ಮರಿಗಳನ್ನು ಉಚಿತವಾಗಿ  ದತ್ತು ಪಡೆದುಕೊಳ್ಳಬಯಸುವವರು: 1) ತಮ್ಮ ವಿಳಾಸದ ನಕಲು ಪತ್ರ ಕೊಡಬೇಕು. 2)ಪಡೆದು ಕೊಳ್ಳುವ ಬೆಕ್ಕು/ನಾಯಿ ಮರಿಗಳಿಗೆ ಸಂತಾನವಾಗದಂತೆ ಚಿಕಿತ್ಸೆ ಆಗಿರದಿದ್ದರೆ ಅದನ್ನು ಮಾಡಿಸಬೇಕು. 3)ತಿಂಗಳಿಗೊಮ್ಮೆ ಅವುಗಳ ಆರೋಗ್ಯ ವರದಿ ನೀಡಬೇಕು. 4)ಶಿಬಿರ ತಾ 09-11-2025 ಬೆಳಿಗ್ಗೆ 10ರಿಂದ ಸಾಯಂಕಾಲ 5 ಗಂಟೆಯವರೇಗೆ ನಡೆಯುವುದು.

ಹೆಚ್ಚಿನ ವಿವರಗಳಿಗೆ ಎನಿಮಲ್ ಕೇರ್ ಟ್ರಸ್ಟ ಸಂಖ್ಯೆ +91 99022 53064 ಮೊಬೈಲ್ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡಕೊಳ್ಳಬಹುದು ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here