ವೇಣೂರು: ಪತಿ-ಪತ್ನಿ ಆತ್ಮಹತ್ಯೆಗೆ ಶರಣು

0

ಬೆಳ್ತಂಗಡಿ: ಕಾಶಿಪಟ್ಣ ಗ್ರಾಮದ ಉರ್ದು ಗುಡ್ಡೆ ನಿವಾಸಿಗಳಾದ ನೊಣಯ್ಯ ಪೂಜಾರಿ(63 ವರ್ಷ) ಮತ್ತು ಅವರ ಪತ್ನಿ ಬೇಬಿ (46 ವರ್ಷ) ರವರು ಮನೆಯ ಸಮೀಪದ ಕಾಡಿನಲ್ಲಿ ಗುರುವಾರ(ಸೆಪ್ಟೆಂಬರ್ 19) ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ನೊಣಯ್ಯ ಪೂಜಾರಿ ಕಳೆದ ಐದು ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದರು.ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗಲ್ಲಿದ್ದರು. ನೋಣಯ್ಯ ಪೂಜಾರಿಗೆ ಇದು ಎರಡನೇ ಮದುವೆ, ಹಿಂದಿನ ಪತ್ನಿ ಕಳೆದ ಹತ್ತು ವರ್ಷದ ಹಿಂದೆ ಸಾವನ್ನಪ್ಪಿದರು. ಬಳಿಕ ಬೇಬಿಯನ್ನು ವಿವಾಹವಾಗಿದ್ದರು.

ಮೊದಲನೆ ಪತ್ನಿಗೆ ಐದು ಗಂಡು, ಒಂದು ಹೆಣ್ಣು ಮಕ್ಕಳಿದ್ದರು.

ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

p>

LEAVE A REPLY

Please enter your comment!
Please enter your name here