ಉಜಿರೆ: ರುಡ್ ಸೆಟ್ ಸಂಸ್ಥೆಯಲ್ಲಿ ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿ ಸಮಾರೋಪ- ವಿದ್ಯೆಯ ಜೊತೆಗೆ ಸಂಸ್ಕಾರ ಬೇಕು: ಉದ್ಯಮಿ ಅರ್ಚನಾ ರಾಜೇಶ್ ಪೈ

0

ಉಜಿರೆ: ಮನುಷ್ಯನಿಗೆ ವಿದ್ಯೆ ದೊಡ್ಡ ಸಂಪತ್ತು, ನಮ್ಮ ಕನಸುಗಳನ್ನು ನನಸಾಗಿಸಲು ನಾವು ಕಲಿತ ವಿದ್ಯೆ ಇರಬೇಕು. ಅದರ ಜೊತೆಗೆ ಅದನ್ನು ಬಳಸಿಕೊಳ್ಳುವ ಸಂಸ್ಕಾರ ಸಹ ಇದ್ದಲ್ಲಿ ಮಾತ್ರ ವಿದ್ಯೆಗೆ ಬೆಲೆ ಬರುವುದು. ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚು ಇದೆ ಅದರಲ್ಲಿ ತೊಡಗಿಸಿಕೊಂಡು ಅದನ್ನು ಕಲಿತು ವೃತ್ತಿಯನ್ನಾಗಿಸಿಕೊಂಡು ಬೆಳೆಯಬೇಕು ಆವಾಗ ನೀವು ಗ್ರಾಹಕರ ಹತ್ತಿರ ಹೋಗಬೇಕಾಗಿಲ್ಲ ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ರುಡ್‌ ಸೆಟ್‌ ಸಂಸ್ಥೆಯಲ್ಲಿ ಅತ್ಯುತ್ತಮವಾದ ಸೌಲಭ್ಯಗಳೊಂದಿಗೆ ತರಬೇತಿ ನೀಡುತ್ತಿರುವುದು ಬಹಳ ಸಂತೋಷ.ಈ ವಿದ್ಯೆ ಯಾವುದೇ ಕಾರಣಕ್ಕೂ ಬಿಡಬೇಡಿ. ವ್ಯವಹಾರದಲ್ಲಿ ಸ್ಪರ್ಧೆ ಇದ್ದಾಗಲೂ ನೈತಿಕತೆಯನ್ನು ಬಿಟ್ಟು ವ್ಯವಹಾರ ಮಾಡಬೇಡಿ. ನಮ್ಮ ಕನಸನ್ನು ನನಸು ಮಾಡಲು ಕಷ್ಟಪಡಲೇ ಬೇಕು. ವ್ಯವಹಾರವನ್ನು ಹಂತ ಹಂತವಾಗಿ ಆರಂಭಿಸಿ, ನಾನು ಎನ್ನುವ ಭಾವನೆಕ್ಕಿಂತ ನಾವು ಎನ್ನುವ ಭಾವನೆಯೊಂದಿಗೆ ವ್ಯವಹಾರ ನಡೆಸಿ ವ್ಯವಹಾರದಲ್ಲಿ ಆಳಾಗಿ ದುಡಿದು, ಮಾಲಕರಾಗಿ ಎಂದು ಉಜಿರೆ ಸಂಧ್ಯಾ ಪ್ರೇಶ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು/ಯಶಸ್ವಿ ಮಹಿಳಾ ಉದ್ಯಮಿ ಅರ್ಚನಾ ರಾಜೇಶ್‌ ಪೈ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ವಸ್ತ್ರ ಚಿತ್ರಕಲಾ ಉದ್ಯಮಿ (ಎಂಬ್ರಾಡರಿ ಮತ್ತು ಫ್ಯಾಬ್ರಿಕ್‌ ಫೈಂಟಿಂಗ್‌) ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ, ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಮಾತನಾಡಿ ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕಿ ರಶ್ಮಿ ರಾಘವೇಂದ್ರ ಮಾತನಾಡಿ ಶಿಬಿರಾರ್ಥಿಗಳಿಗೆ ಶುಭಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 30 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು. ಅಮೃತಲಕ್ಷ್ಮೀ ಪ್ರಾರ್ಥಿಸಿದರು.

ಸುಷ್ಮಾ, ಪುಷ್ಪ ಜೈನ್, ರಕ್ಷಿತಾ ರೈ ತರಬೇತಿಯ ಅನುಭವ ಹಂಚಿಕೊಂಡರು.

LEAVE A REPLY

Please enter your comment!
Please enter your name here