ಬೆಳ್ತಂಗಡಿ: ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ದಿವ್ಯ ಆಶೀರ್ವಾದದೊಂದಿಗೆ ಸೆ.16ರಂದು ಸಂಘದ ಸಭಾಭವನದಲ್ಲಿ ಶಿವಪ್ರಸಾದ ಪುರೋಹಿತ್ ಸವಣಾಲು ಇವರ ಪೌರೋಹಿತ್ಯದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ ನಡೆಯಿತು.
ಬೆಳಿಗ್ಗೆ 11ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಸಭಾ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಭಾಗವಹಿಸಿದ್ದರು.ಮುರ್ಡೇಶ್ವರ ಆರ್‌ಎನ್‌ಎಸ್ ಪಾಲಿಟೆಕ್ನಿಕ್ ವಿಭಾಗೀಯ ಮುಖ್ಯಸ್ಥ ಚೇಂಪಿ ದಿನೇಶ್ ಆಚಾರ್ಯ ಧಾರ್ಮಿಕ ಉಪನ್ಯಾಸವನ್ನು ನೀಡಿದರು.
ಗೌರವ ಉಪಸ್ಥಿತಿಯಲ್ಲಿ ಉದ್ಯಮಿ ಬಿ.ಕೆ.ಸತೀಶ ಆಚಾರ್ಯ, ಶ್ರೀ ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ತಾಲೂಕು ಘಟಕ ಅಧ್ಯಕ್ಷ ಆನಂದ ಆಚಾರ್ಯ ಮಾಪಲಾಡಿ, ಯುವ ಉದ್ಯಮಿಗಳು ಶಿಲ್ಪಿ ಶಶಿಧರ ಆಚಾರ್ಯ, ಶಿವಪ್ರಸಾದ್ ಸವಣಾಲು, ಪ್ರಾಧ್ಯಾಪಕ ತಾರಾನಾಥ ಆಚಾರ್ಯ, ಬೆಳ್ತಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಉಷಾ ಹರಿಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್ ಗುಂಪಲಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಕುಮಾರಿ ಜಯಶ್ರೀ ಪ್ರಾರ್ಥಿಸಿ, ಸದಾನಂದ ಆಚಾರ್ಯ ಅಳದಂಗಡಿ ಸ್ವಾಗತಿಸಿದರು.ಲತಾ ಬಾಲಚಂದ್ರ ಆಚಾರ್ಯ ಹಾಗೂ ರುಕ್ಮಯ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1.30ರಿಂದ ಆಕರ್ಷಣ ಕಲಾ ತಂಡ, ಬೆಳ್ತಂಗಡಿ ಅಭಿನಯಿಸುವ ರಾಜೇಶ್ ಆಚಾರ್ಯ ಕಥೆ-ಸಾಹಿತ್ಯ-ಸಂಭಾಷಣೆಯ, ದಿನೇಶ್ ಕೋಟ್ಯಾನ್ ನಿರ್ದೇಶನ ಹಾಗೂ ನಿರ್ಮಾಣದ “ಪಂಡಿನವು ನೆನಪಿಪ್ಪಡ್” ತುಳು ಸಾಮಾಜಿಕ ಸಾಂಸಾರಿಕ ಹಾಸ್ಯಮಯ ನಾಟಕ ನಡೆಯಲಿದೆ.